ಕರಿಬೇವನ್ನು ಶುದ್ದ ನೀರಿನಿಂದ ತೊಳೆದು ಕಾಟನ್ ಬಟ್ಟೆಯ ಮೇಲೆ ಹರಡಿಕೊಳ್ಳಿ. ಅದರ ನೀರು ಸರಿಯಾಗಿ ಒಣಗಿ ಹೋದ ನಂತರ ಜಿಪ್ ಲಾಕ್ ಕವರ್ ನಲ್ಲಿ ಹಾಕಿಡಿ.
ಏರ್ ಟೈಟ್ ಕಂಟೇನರ್ ನಲ್ಲಿ ಕೂಡಾ ಕರಿಬೇವನ್ನು ಬಹಳ ದಿನಗಳವರೆಗೆ ತಾಜಾವಾಗಿ ಇಡಬಹುದು.
ಕರಿಬೇವನ್ನು ಶುದ್ದ ನೀರಿನಿಂದ ತೊಳೆದು ಫ್ಯಾನ್ ಗಾಳಿಯಲ್ಲಿ ಸಂಪೂರ್ಣವಾಗಿ ಒಣಗಿಸಿಕೊಳ್ಳಿ, ಇದಾದ ಬಳಿಕ ಗಾಜಿನ ಡಬ್ಬದಲ್ಲಿ ಹಾಕಿಡಿ.
ಕರಿಬೇವನ್ನ ತೊಳೆದು ಒಣಗಿಸಿದ ಮೇಲೆ ಅದನ್ನು ಫ್ರೀಜರ್ ನಲ್ಲಿ ಇಡಬಹುದು.
ಕರಿಬೇವನ್ನ ಬಿಸಿಲಿನಲ್ಲಿ ಒಣಗಿಸಿ ಕೂಡಾ ಗಾಳಿಯಾಡದ ಡಬ್ಬದಲ್ಲಿ ಹಾಕಿಡಬಹುದು.
ಕರಿಬೇವನ್ನು ನೀರಿನಲ್ಲಿಟ್ಟು ಮೇಲಿನಿಂದ ಪ್ಲಾಸ್ಟಿಕ್ ಮುಚ್ಚಿ. ಪ್ರತಿ 48 ಗಂಟೆಗೊಮ್ಮೆ ಈ ನೀರನ್ನು ಬದಲಾಯಿಸುತ್ತಾ ಇರಿ.
ಕರಿಬೇವನ್ನು ತೊಳೆದು ಟಿಶ್ಯೂ ಪೇಪರ್ ಮೂಲಕ ಒಣಗಿಸಿ ನಂತರ ಗಾಳಿಯಾಡದ ಡಬ್ಬದಲ್ಲಿ ಹಾಕಿಡಬಹುದು.