ಬೇಸಿಗೆಯಲ್ಲಿ ಮನೆಯಲ್ಲಿ ತಂಪಾಗಿರಿಸುವುದೇ ಒಂದು ಟಾಸ್ಕ್. ಎಸಿ, ಕೂಲರ್ ಇಲ್ಲದೆ ಮನೆಯನ್ನು ತಂಪಾಗಿರಿಸುವ ವಿಧಾನ ಇಲ್ಲಿದೆ.
ಮನೆಯ ಒಳಗೆ ಸೂರ್ಯನ ನೇರ ಕಿರಣಗಳು ಬರುತ್ತಿದ್ದರೆ ಅದನ್ನು ಬ್ಲಾಕ್ ಮಾಡಲು ಥರ್ಮಲ್ ಸ್ಕ್ರೀನ್ ಅನ್ನು ಬಳಸಿ.
ಬೇಸಿಗೆಯಲ್ಲಿ ಮನೆಯ ಕಿಟಕಿ ಬಾಗಿಲನ್ನು ತೆರೆದಿಡಬೇಡಿ. ಬಿಸಿ ಗಾಳಿ ಮನೆಯನ್ನು ಪ್ರವೇಶಿಸುತ್ತದೆ.
ಮನೆಯ ವಾತಾವರಣ ತಂಪಾಗಿಸಲು ಕೆಲವು ಸಸ್ಯಗಳನ್ನು ನೆಡಿ. ಮನೆಯೊಳಗೇ ಇಟ್ಟಿರುವ ಸಸ್ಯ ಮನೆಯೊಳಗೆ ತಂಪು ಗಾಳಿ ಬೀಸುವುದಕ್ಕೆ ಕಾರಣವಾಗುತ್ತದೆ.
ಇನ್ನು ಮನೆಯೊಳಗೆ ಸೂರ್ಯನ ನೇರ ಕಿರಣ ಬಾರದಂತೆ ತಡೆಯಲು ಬಿದಿರಿನ ಪರದೆಯನ್ನು ಬಳಸಿ.
ಬಿದಿರಿನ ಪದರೆಗೆ ನೀರನ್ನು ಸಿಂಪಡಿಸಿ ಬಳಸಬಹುದು. ಇದರಿಂದ ಮನೆಯೊಳಗೇ ತಂಪಾಗಿರುತ್ತದೆ.
ಬೇಸಿಗೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಮನೆಯ ಬಾಗಿಲನ್ನು ಮುಚ್ಚಿಯೇ ಇಡಿ.
ಇದರ ಜೊತೆಗೆ ಬೇಸಿಗೆಯಲ್ಲಿ ಕಾಟನ್ ಬಟ್ಟೆಯನ್ನೇ ಧರಿಸಿ. ಅಲ್ಲದೆ ಕಾಟನ್ ಬೆಡ್ ಶೀಟ್ ಅನ್ನೇ ಉಪಯೋಗಿಸಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.