ಮಸಾಲಾ ದೋಸೆ ತುಂಬಾ ಟೇಸ್ಟಿ ಮತ್ತು ಆರೋಗ್ಯಕರ. ಇದನ್ನು ಅಕ್ಕಿ ಮತ್ತು ಬೇಳೆ ಕಾಳುಗಳಿಂದ ತಯಾರಿಸಲಾಗುತ್ತದೆ. ಮಸಾಲೆ ದೋಸೆಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.
ಬೇಕಾಗುವ ಸಾಮಗ್ರಿ ದೋಸೆ ಹಿಟ್ಟು ಬೇಯಿಸಿದ ಆಲೂಗಡ್ಡೆ ಈರುಳ್ಳಿ ಹಸಿ ಮೆಣಸಿನಕಾಯಿ ಕಡಲೆಬೇಳೆ ಸಾಸಿವೆ ಜೀರಿಗೆ ಉಪ್ಪು
ಮೊದಲು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಸಾಸಿವೆ, ಉದ್ದಿನಬೇಳೆ, ಇಂದು ಸೇರಿಸಿ. ಇದು ತಿಳಿ ಕಂದು ಬಣ್ಣಕ್ಕೆ ತಿರುಗಿದಾಗ ಹಸಿರು ಮೆಣಸಿನ ಕಾಯಿ ಕರಿಬೇವಿನ ಎಲೆಗಳನ್ನು ಸೇರಿಸಿ.
ಈಗ ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಉಪ್ಪು ಸೇರಿಸಿ. ಈಗ ಇದಕ್ಕೆ ಬೇಯಿಸಿದ ಆಲೂಗಡ್ಡೆ ಹಾಕಿ ಮ್ಯಾಶ್ ಮಾಡಿ.
ಈ ಮಿಶ್ರಣ ಸರಿಯಾಗಿ ಬೆಂದ ಬಳಿಕ ಕೊತ್ತಂಬರಿ ಸೊಪ್ಪನ್ನು ಸೇರಿಸಿ.
ಇದರ ನಂತರ ದೋಸೆ ಹಿಟ್ಟನ್ನು ತೆಗೆದುಕೊಂಡು ನಾನ್ ಸ್ಟಿಕ್ ಪ್ಯಾನ್ ಮೇಲೆ ಹಾಕಿ. ಅದರ ಮೇಲೆ ಸಿದ್ದ ಪಡಿಸಿದ ಆಲೂಗಡ್ಡೆ ಮಸಾಲವನ್ನು ಹರಡಿ.
ದೋಸೆ ಕಂಡು ಬಣ್ಣಕ್ಕೆ ತಿರುಗುತ್ತಿದ್ದಂತೆಯೇ ದೋಸೆಯ ನ್ನು ಅರ್ಧದಷ್ಟು ಮಡಚಿ. ದೋಸೆ ಪ್ಯಾನ್ ಗೆ ಅಂಟಿಕೊಳ್ಳದಂತೆ ನೋಡಿಕೊಳ್ಳಲು ದೋಸೆಯ ಮೇಲೆ ಎಣ್ಣೆ ಹಾಕುವುದನ್ನು ಮರೆಯಬೇಡಿ.
ಉಳಿದ ಹಿಟ್ಟಿನೊಂದಿಗೆ ಎಲ್ಲಾ ದೋಸೆಯನ್ನು ತಯಾರಿಸಿ, ಸಾಂಬಾರ್ ಅಥವಾ ಚಟ್ನಿಯೊಂದಿಗೆ ಬಡಿಸಿ.
ಈ ರೀತಿಯಾಗಿ ಮನೆಯಲ್ಲಿಯೇ ಸುಲಭವಾಗು ಮಸಾಲ ದೋಸೆಯನ್ನು ತಯಾರಿಸಬಹುದು.