ಕೂದಲು ದಪ್ಪವಾಗಲು ಅಲೋವೇರಾವನ್ನು ಹೀಗೆ ಬಳಸಿ

Bhavishya Shetty
Apr 27,2024

ಪ್ರಯೋಜನ

ಅಲೋವೆರಾ ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ. ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳ ವಿರುದ್ಧ ಹೋರಾಡಲು ಇದು ಸಹಾಯ ಮಾಡುತ್ತದೆ.

ಕೂದಲ ಉತ್ಪನ್ನ

ಅಲೋವೆರಾದಿಂದ ತಯಾರಿಸಿದ ಹಲವಾರು ಕೂದಲ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ನೋಡಿರಬಹುದು. ಆದರೆ ನೈಸರ್ಗಿಕ ಅಲೋವೇರಾವನ್ನು ಬಳಸಿಕೊಂಡು ದಪ್ಪ ಕೂದಲನ್ನು ಪಡೆಯಬಹುದು. ಹೇಗೆ ಎಂಬುದನ್ನು ಮುಂದೆ ತಿಳಿಯೋಣ.

ಹೇರ್ ಮಾಸ್ಕ್

ಹೇರ್ ಮಾಸ್ಕ್ ಮಾಡಲು, 1 ಕಪ್ ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಮರುದಿನ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ಅದಕ್ಕೆ 2 ಚಮಚ ಅಲೋವೆರಾ ಜೆಲ್ ಸೇರಿಸಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ. ವಾರಕ್ಕೆ 3-4 ಬಾರಿ ಹೀಗೆ ಮಾಡಿದರೆ ಕೂದಲು ದಪ್ಪವಾಗಿ ಬೆಳೆಯುತ್ತದೆ.

ಹೇರ್ ಮಾಸ್ಕ್

ಬ್ರಷ್ನ ಸಹಾಯದಿಂದ ಈ ಹೇರ್ ಮಾಸ್ಕ್ ಅನ್ನು ಕೂದಲು ಮತ್ತು ನೆತ್ತಿಯ ಮೇಲೆ ಸಂಪೂರ್ಣವಾಗಿ ಹಚ್ಚಿ. ನಂತರ ಶವರ್ ಕ್ಯಾಪ್ ಸಹಾಯದಿಂದ ಕವರ್ ಮಾಡಿ. ಸುಮಾರು 1 ಗಂಟೆಯ ನಂತರ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.

ಹೇರ್ ಮಾಸ್ಕ್

ಇನ್ನು ಹೆಚ್ಚಿನ ಪ್ರಯೋಜನ ಪಡೆಯಲು ಈ ಹೇರ್ ಮಾಸ್ಕ್’ಗೆ ನೆಲ್ಲಿಕಾಯಿ ಪುಡಿಯನ್ನು ಬೆರೆಸಿ. ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ನೆಲ್ಲಿಕಾಯಿಯಲ್ಲಿ ಹೇರಳವಾಗಿ ಕಂಡುಬರುತ್ತವೆ. ಇದು ಕೂದಲು ಉದುರುವುದನ್ನು ತಡೆಯುವುದಲ್ಲದೆ, ದಷ್ಟಪುಷ್ಟ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.

ಒಣ ಕೂದಲಿನ ಸಮಸ್ಯೆ

ಕೂದಲು ಉದುರುತ್ತಿದ್ದರೆ ಸಹ ಅಲೋವೆರಾವನ್ನು ಬಳಸಬಹುದು. ಜೊತೆಗೆ ಇದು ಒಣ ಕೂದಲಿನ ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ.

ಸೂಚನೆ

ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.

VIEW ALL

Read Next Story