ಅಡುಗೆಗೆ ಬಳಸುವ ಈ ವಸ್ತು ನಿಮ್ಮ ಮನೆಯ ಸಸಿಗಳನ್ನು ಹಚ್ಚ ಹಸಿರಾಗಿರುವಂತೆ ಮಾಡುತ್ತದೆ

Published by: Zee Team | Mar 03, 2023

ಇಂಗನ್ನು ಕೀಟನಾಶಕವಾಗಿ ಬಳಸಬಹುದು.

Published by: Zee Team | Mar 03, 2023

ಸಸಿಗಳ ಬೇರು ಹಾಳಾದಾಗ ಅಗತ್ಯ ಪೋಷಕಾಂಶಗಳು ಸಸ್ಯದ ಭಾಗಗಳನ್ನು ತಲುಪುವುದು ಸಾಧ್ಯವಿಲ್ಲ. ಇದಕ್ಕಾಗಿ ಒಂದು ಚಮಚ ಇಂಗನ್ನು ಒಂದು ಲೋಟ ನೀರು ಮಜ್ಜಿಗೆಯೊಂದಿಗೆ ಬೆರೆಸಿ. ಅದನ್ನು ಸಸ್ಯದ ಬೇರಿಗೆ ಹಾಕಿ.

Published by: Zee Team | Mar 03, 2023

ಇಂಗಿನ ಸಹಾಯದಿಂದ ಕೀಟನಾಶಕ ತಯಾರಿಸಬಹುದು. ಇದಕ್ಕಾಗಿ ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದಕ್ಕೆ ಇಂಗು ಹಾಕಿ ಕರಗಲು ಬಿಡಿ. ಅರ್ಧ ಗಂಟೆಯವರೆಗೆ ಅದನ್ನು ಹಾಗೆಯೇ ಬಿಡಿ. ನಂತರ ಈ ನೀರನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ ಸಸ್ಯಗಳ ಮೇಲೆ ಸಿಂಪಡಿಸಿ.

Published by: Zee Team | Mar 03, 2023

ಒಂದು ಬೌಲ್ ಚಹಾ ಎಲೆಗಳು, ಅರ್ಧಟೀ ಚಮಚ ಇಂಗು, ತೆಗೆದುಕೊಂಡು ಒಂದು ಬಕೆಟ್ ನೀರಿಗೆ ಸೇರಿಸಿ. ಇದನ್ನು ಒಂದು ವಾರದವರೆಗೆ ಹಾಗೆಯೇ ಬಿಡಿ. ನಂತರ ಈ ನೀರನ್ನು ಮನೆಯಲ್ಲಿರುವ ಸಸಿಗಳಿಗೆ ಹಾಕಿ.

Published by: Zee Team | Mar 03, 2023

ಇಂಗು ಒಂದು ರೀತಿಯ ಸುಗಂಧವನ್ನು ಹೊಂದಿದೆ. ಇದನ್ನು ಮರ ಮತ್ತು ಸಸ್ಯಗಳ ಮೇಲೆ ಸಿಂಪಡಿಸಿದಾಗ ಕೀಟಗಳು ಸಸ್ಯಗಳ ಹತ್ತಿರವೂ ಸುಳಿಯುವುದಿಲ್ಲ.

Published by: Zee Team | Mar 03, 2023

ಮನೆಯಲ್ಲಿ ಬಳ್ಳಿ ತರಕಾರಿ ಬೆಳೆಸಿದ್ದು, ಅದು ಹೂವು ಬಿಟ್ಟು ಉದುರಲು ಪ್ರಾರಂಭಿಸಿದರೆ ಇಂಗನ್ನು ಮೊಸರು ಅಥವಾ ನೀರಿನೊಂದಿಗೆ ಬೆರೆಸಿ ಬೇರುಗಳ ಬಳಿ ಸಿಂಪಡಿಸಿ.

Published by: Zee Team | Mar 03, 2023

ಕೆಲವು ಮರಗಳ ಎಲೆಗಳು ತಿರುಚಿಕೊಳ್ಳಲು ಆರಂಭಿಸುತ್ತವೆ. ಹೀಗಾದಾಗ ಮರ ಗಿಡಗಳ ಸೌಂದರ್ಯ ಹಾಳಾಗುತ್ತದೆ. ಹೀಗಾದಾಗ ಇಂಗು ದ್ರಾವಣವನ್ನು ತಯಾರಿಸಿ ಎಲೆಗಳ ಮೇಲೆ ಸಿಂಪಡಿಸಿ.

Published by: Zee Team | Mar 03, 2023

VIEW ALL

Read Next Story