ಮೊಸರು ವಿಪರೀತ ಹುಳಿ ಬಂದಿದ್ದರೆ ಬಳಸುವುದು ಹೇಗೆ ?

Ranjitha R K
Feb 16,2023


ಮೊಸರು ವಿಪರೀತ ಹುಳಿ ಬಂದಿದ್ದರೆ ಅದನ್ನು ತಿನ್ನುವುದು ಸಾಧ್ಯವಾಗುವುದಿಲ್ಲ. ಆದರೆ ಕೆಲವೊಂದು ಪದಾರ್ಥಗಳನ್ನು ತಯಾರಿಸುವಾಗ ಹುಳಿ ಮೊಸರನ್ನು ಬಳಸಬಹುದು.


ಪೂರಿಗೆ ಹಿಟ್ಟು ತಯಾರಿಸುವಾಗ ಹುಳಿ ಮೊಸರು ಹಾಕಬಾಹುದು. ಇದರಿಂದ ಹಿಟ್ಟು ನಾದಲು ಸುಲಭವಾಗುತ್ತದೆ.


ಊಟದ ತಟ್ಟೆಯಲ್ಲಿ ಚಟ್ನಿ ಇದ್ದರೆ ಪಲ್ಯದ ಅಗತ್ಯವಿರುವುದಿಲ್ಲ.ಮನೆಯಲ್ಲಿ ಹುಳಿ ಮೊಸರು ಇದ್ದರೆ ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ ಪೇಸ್ಟ್ ಮಾಡಿಕೊಂಡು ಮೊಸರಿಗೆ ಹಾಕಿ ರುಚಿಕರ ಚಟ್ನಿ ತಯಾರಿಸಿಕೊಳ್ಳಿ .


.ದೋಸೆ ಹಿಟ್ಟು ತಯಾರಿಸುವಾಗಲೂ ಹುಳಿ ಮೊಸರು ಬೆರೆಸಬಹುದು. ಇದರಿಂದ ಹಿಟ್ಟು ಉಬ್ಬಿ ಬರುತ್ತದೆ. ದೋಸೆ ಕೂಡಾ ಮೃದುವಾಗುತ್ತದೆ.


ಗೋಧಿ ಹಿಟ್ಟು, ಕಡಲೆ ಹಿಟ್ಟು, ಅವಲಕ್ಕಿ ರವೇ ದೋಸೆಗಳ ಹಿಟ್ಟು ತಯಾರಿಸುವಾಗ ಹುಳಿ ಮೊಸರು ಹಾಕಿದರೆ ದೋಸೆ ಮೃದುವಾಗುತ್ತದೆ. ಅಲ್ಲದೆ, ರುಚಿಯೂ ಹೆಚ್ಚುತ್ತದೆ.


ಮೊಸರನ್ನು ಪನೀರ್ ಮಾಡಲು ಕೂಡಾ ಬಳಸಬಹುದು. ಇದಕ್ಕಾಗಿ ಮೊದಲು ಮೊಸರನ್ನು ಬಿಸಿ ಮಾಡಬೇಕು ನಂತರ ನೀರನ್ನು ಬಸಿದು ಉಳಿದ ಭಾಗವನ್ನು ಒಂದು ಬಟ್ಟೆಯಲ್ಲಿ ಕಟ್ಟಿಡಬೇಕು.


ಈ ಎಲ್ಲಾ ರೀತಿಯಲ್ಲಿ ಹುಳಿ ಮೊಸರನ್ನು ಬಳಸಲು ಯೋಗ್ಯವಾಗ್ವಂತೆ ಮಾಡಬಹುದು.

VIEW ALL

Read Next Story