ಈ ಕಾರಣಕ್ಕೆ ಮಳೆಗಾಲದಲ್ಲಿ ಬೆಳ್ಳುಳ್ಳಿ ತಿನ್ನಲೇ ಬೇಕು

ಬೆಳ್ಳುಳ್ಳಿಯನ್ನು ಅನೇಕ ರೀತಿಯಲ್ಲಿ ಬಳಸಲಾಗುತ್ತದೆ. ಮಳೆಗಾಲದಲ್ಲಿ ಇದನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ.

ವಿಟಮಿನ್ ಬಿ ಮತ್ತು ವಿಟಮಿನ್ ಸಿ ಬೆಳ್ಳುಳ್ಳಿಯಲ್ಲಿ ಹೇರಳವಾಗಿ ಕಂಡು ಬರುತ್ತದೆ. ಅಲ್ಲದೆ ಸೆಲೆನಿಯಂ, ಮ್ಯಾಂಗನೀಸ್, ಕ್ಯಾಲ್ಷಿಯಂ ನಂಥಹ ಅಂಶಗಳು ಕೂಡಾ ಇದರಲ್ಲಿ ಕಂಡು ಬರುತ್ತವೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿ.

ಬದಲಾಗುತ್ತಿರುವ ಹವಾಮಾನದಿಂದಾಗಿ ಶೀತ ಕೆಮ್ಮಿನ ಸಮಸ್ಯೆ ಕಾಡಬಹುದು. ಬೆಳ್ಳುಳ್ಳಿ ಸೇವನೆಯಿಂದ ಈ ಸಮಸ್ಯೆಗೆ ಪರಿಹಾರ ಸಿಗಬಹುದು.

ಬೆಳ್ಳುಳ್ಳಿಯಲ್ಲಿ ನಂಜು ನಿರೋಧಕ ಗುಣವಿದ್ದು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಹೊಟ್ಟೆಯಲ್ಲಿ ಹುಳ ಇದ್ದಾಗ ಬೆಳ್ಳುಳ್ಳಿ ಸೇವನೆಯಿಂದ ಪರಿಹಾರ ಸಿಗುತ್ತದೆ.

ಮಳೆಗಾಲದಲ್ಲಿ ಅನೇಕರಿಗೆ ಉಸಿರಾಟದ ಸಮಸ್ಯೆ ಕಾಣಿಸುತ್ತದೆ. ಇದರ ಪರಿಹಾರಕ್ಕೆ ಮಳೆಗಾಲದಲ್ಲಿ ಬೆಳ್ಳುಳ್ಳಿ ಸೇವಿಸಬೇಕು.

ಮಳೆಗಾಲದ ರೋಗಗಳನ್ನು ತಪ್ಪಿಸಲು ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದುವುದು ಅಗತ್ಯ. ಬೆಳ್ಳುಳ್ಳಿ ಸೇವನೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಲವಂಗದಂತೆ ಬೆಳ್ಳುಳ್ಳಿ ಕೂಡಾ ಹಲ್ಲು ನೋವಿನಿಂದ ಪರಿಹಾರ ನೀಡುತ್ತದೆ.

ಆದರೆ ನೆನಪಿರಲಿ ದಿನಕ್ಕೆ ಎರಡು ಎಸಳು ಬೆಳ್ಳುಳ್ಳಿ ಮಾತ್ರ ತಿನ್ನಬೇಕು. ಇಲ್ಲವಾದರೆ ಮತ್ತೆ ಆರೋಗ್ಯ ಸಮಸ್ಯೆ ಕಾಡಬಹುದು.

ಜೇನು ತುಪ್ಪವನ್ನು ಜೇನು ತುಪ್ಪದಲ್ಲಿ ಅರೆದು ಕೂಡಾ ಸೇವಿಸಬಹುದು.

VIEW ALL

Read Next Story