ಎಣ್ಣೆಯುಕ್ತ ಚರ್ಮದಿಂದ ಪರಿಹಾರಕ್ಕಾಗಿ ನಿಮ್ಮ ಡಯಟ್ನಲ್ಲಿರಲಿ ಈ 5 ಆಹಾರ

Yashaswini V
Nov 20,2023

ಎಣ್ಣೆಯುಕ್ತ ಚರ್ಮ

ಎಣ್ಣೆಯುಕ್ತ ಚರ್ಮಕ್ಕೆ ಹಲವು ಕಾರಣಗಳಿರಬಹುದು. ಕೆಲವೊಮ್ಮೆ ನಿರ್ದಿಷ್ಟ ಆಹಾರ ಕ್ರಮವು ಸಹ ಎಣ್ಣೆ ಉತ್ಪಾದನೆ, ಮೊಡವೆ, ಬ್ಲಾಕ್ ಹೆಡ್‌ಗಳು ಮತ್ತು ವೈಟ್‌ಹೆಡ್‌ಗಳಂತಹ ಹಲವು ಚರ್ಮದ ಸಮಸ್ಯೆಗೆ ಕಾರಣವಾಗಿರಬಹುದು.

ಆಹಾರ ಪದ್ದತಿ

ಆದರೆ, ನಿಮ್ಮ ದೈನಂದಿನ ಆಹಾರದಲ್ಲಿ ಕೆಲವು ಆಹಾರಗಳನ್ನು ಸೇರಿಸುವ ಮೂಲಕ ಈ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು. ಅವುಗಳೆಂದರೆ...

ಸೌತೆಕಾಯಿ

ಸಾಕಷ್ಟು ನೀರಿನ ಅಂಶವನ್ನು ಹೊಂದಿರುವ ಸೌತೆಕಾಯಿ ಹಾರ್ಮೋನುಗಳ ಸರಿಯಾದ ಸ್ರವಿಸುವಿಕೆಯನ್ನು ಬೆಂಬಲಿಸುತ್ತದೆ. ಅಷ್ಟೇ ಅಲ್ಲ ಇದು ಆರೋಗ್ಯಕರ ಚರ್ಮವನ್ನು ಉತ್ತೇಜಿಸಲು ಪ್ರಮುಖ ಉತ್ಕರ್ಷಣ ನಿರೋಧಕ ಅಂಶಗಳನ್ನು ಒಳಗೊಂಡಿದೆ.

ಧಾನ್ಯಗಳು

ಹುರುಳಿ, ಬಯೋಟಿನ್‌ನಲ್ಲಿ ಸಮೃದ್ಧವಾಗಿರುವ ಗೋಧಿ, ಓಟ್ಸ್ ಮತ್ತು ಕಂದು ಅಕ್ಕಿಯಂತಹ ಫೈಬರ್-ಭರಿತ ಆಹಾರಗಳು ಮುಚ್ಚಿಹೋಗಿರುವ ರಂಧ್ರಗಳು, ಮೊಡವೆ ಮತ್ತು ಇತರ ಚರ್ಮದ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರವಾಗಿದೆ.

ನಟ್ಸ್

ನಟ್ಸ್ ನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಹೇರಳವಾಗಿ ಕಂಡು ಬರುತ್ತದೆ. ಇದು ಚರ್ಮದ ವಿನ್ಯಾಸಕ್ಕೆ ಕೊಡುಗೆ ನೀಡುವುದರ ಜೊತೆಗೆ ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಪ್ರಯೋಜನಕಾರಿ ಆಗಿದೆ.

ಬಾಳೆ ಹಣ್ಣು

ವಿಟಮಿನ್ ಇ, ಫಾಸ್ಫೇಟ್ಗಳು ಮತ್ತು ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿರುವ ಬಾಳೆ ಹಣ್ಣು ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಕಾರಿ ಆಗಿದೆ.

ಪಾಲಕ್

ಹೆಚ್ಚಿನ ಫೈಬರ್ ಹೊಂದಿರುವ ಪಾಲಕ್ ಸೇವನೆಯಿಂದ ಚರ್ಮದ ತೈಲ ಉತ್ಪಾದನೆ ನಿಯಂತ್ರಣಗೊಂಡು ಸ್ಪಷ್ಟ, ಸುಂದರ ಚರ್ಮವನ್ನು ನಿಮ್ಮದಾಗಿಸಬಹುದು. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story