ಪುರುಷರು ಮತ್ತು ಮಹಿಳೆಯರು ಇಬ್ಬರಲ್ಲೂ ಕೂಡ ಗುಪ್ತಾಂಗಗಳಲ್ಲಿ ತುರಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಸಾಮಾನ್ಯವಾಗಿ ಬಿಗಿಯಾದ ಒಳ ಉಡುಪುಗಳನ್ನು ಧರಿಸುವುದರಿಂದ ಅಥವಾ ಬೆವರುವಿಕೆಯಿಂದ ಈ ಸಮಸ್ಯೆ ಉಂಟಾಗುತ್ತದೆ. ಕೆಲವು ಮನೆಮದ್ದುಗಳಿಂದ ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು.
ಫಂಗಲ್ ಇನ್ಫೆಕ್ಷನ್ ನಿಂದಾಗಿ ಗುಪ್ತಾಂಗಗಳಲ್ಲಿ ತುರಿಕೆ ಸಮಸ್ಯೆಕಾಣಿಸಿಕೊಳ್ಳುತ್ತದೆ. ಇದನ್ನು ತಪ್ಪಿಸಲು ಟೀ ಟ್ರೀ ಎಣ್ಣೆ ತುಂಬಾ ಪ್ರಯೋಜನಕಾರಿ. ಇದರ ಒಂದೆರಡು ಹನಿಯನ್ನು ತುರಿಕೆ ಜಾಗದಲ್ಲಿ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯಿರಿ.
ಕೊಬ್ಬರಿ ಎಣ್ಣೆಯನ್ನು ಉಗುರು ಬೆಚ್ಚಗೆ ಕಾಯಿಸಿ ಪೀಡಿತ ಪ್ರದೇಶದಲ್ಲಿ ಹಚ್ಚುವುದರಿಂದಲೂ ತುರಿಕೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಯೋನಿ ಅಥವಾ ಖಾಸಗಿ ಭಾಗದಲ್ಲಿ ವಿಪರೀತ ತುರಿಕೆ ಇದ್ದರೆ, ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಮತ್ತು ನಿಮ್ಮ ಖಾಸಗಿ ಭಾಗಗಳನ್ನು ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ತುರಿಕೆ ನಿವಾರಣೆಯಾಗುತ್ತದೆ.
ಆಪಲ್ ಸೈಡರ್ ವಿನೆಗರ್ ಆಂಟಿ ಫಂಗಲ್ ಗುಣಗಳನ್ನು ಹೊಂದಿದೆ. ಒಂದು ಲೋಟ ನೀರಿನಲ್ಲಿ ಎರಡು ಚಮಚ ಆಪಲ್ ಸೈಡರ್ ವಿನೆಗರ್ ಹಾಕಿ ಖಾಸಗಿ ಭಾಗವನ್ನು ಸ್ವಚ್ಛಗೊಳಿಸಿ. ಇದರಿಂದಲೂ ತುರಿಕೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಖಾಸಗಿ ಭಾಗದಲ್ಲಿ ತುರಿಕೆಯಿಂದ ಪರಿಹಾರ ಪಡೆಯಲು ಐಸ್ ಪ್ಯಾಕ್ ಕೂಡ ತುಂಬಾ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.