ಪೂಜೆಗಷ್ಟೇ ಅಲ್ಲ… ಕೃಷ್ಣ ತುಳಸಿಯಿಂದ ದೇಹಕ್ಕಿದೆ ಇಷ್ಟೆಲ್ಲಾ ಲಾಭ!

Bhavishya Shetty
Jan 15,2024

ಪವಿತ್ರವಾದ ಸ್ಥಾನ

ಹಿಂದೂ ಧರ್ಮದ ಪ್ರಕಾರ ತುಳಸಿಗೆ ಪವಿತ್ರವಾದ ಸ್ಥಾನವಿದೆ. ಇದು ದೈವಿಕ ಅಂಶ ಮಾತ್ರವಲ್ಲದೆ, ಔಷಧೀಯ ಸಸ್ಯವೂ ಆಗಿದೆ. ಹಲವಾರು ವರ್ಷಗಳಿಂದ ಆಯುರ್ವೇದದಲ್ಲಿ ತುಳಸಿಯನ್ನು ಬಳಕೆ ಮಾಡಲಾಗುತ್ತಿದೆ.

ಪ್ರಯೋಜನ

ಅಂದಹಾಗೆ ನಾವಿಂದು ಕೃಷ್ಣ ಅಥವಾ ಶ್ಯಾಮ ತುಳಸಿ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇದು ವಿಶೇಷ ರೀತಿಯ ತುಳಸಿ ಸಸ್ಯವಾಗಿದ್ದು, ಅದರ ಎಲೆಗಳು ಮತ್ತು ಬೇರುಗಳಲ್ಲಿ ಅದ್ಭುತವಾದ ಪ್ರಯೋಜನಗಳನ್ನು ಹೊಂದಿದೆ.

ಶ್ಯಾಮ ತುಳಸಿ

ಕೃಷ್ಣ ತುಳಸಿ ಗುರುತಿಸಲು ತುಂಬಾ ಸುಲಭ. ಭಾರತದ ಅನೇಕ ಭಾಗಗಳಲ್ಲಿ ಇದನ್ನು ಶ್ಯಾಮ ತುಳಸಿ ಎಂದೂ ಕರೆಯುತ್ತಾರೆ. ಏಕೆಂದರೆ, ಅದರ ಬಣ್ಣ ಕೃಷ್ಣ ಅಂದರೆ ಶ್ಯಾಮನಂತಿದೆ. ಕೃಷ್ಣ ತುಳಸಿಯ ಎಲೆಗಳು, ಹೂವುಗಳು ಮತ್ತು ಬೀಜಗಳು ನೇರಳೆ ಬಣ್ಣವನ್ನು ಹೊಂದಿರುತ್ತವೆ.

ಔಷಧೀಯ ಪ್ರಯೋಜನ

ಆಯುರ್ವೇದದಲ್ಲಿ ಕೃಷ್ಣ ಅಥವಾ ಶ್ಯಾಮ ತುಳಸಿಗೆ ಉನ್ನತ ಸ್ಥಾನವಿದೆ. ಏಕೆಂದರೆ ಇದರ ಎಲೆಗಳ ಜೊತೆಗೆ ಇದರ ಬೀಜಗಳು ಮತ್ತು ಬೇರುಗಳು ಸಹ ಔಷಧೀಯ ಪ್ರಯೋಜನಗಳನ್ನು ಹೊಂದಿವೆ.

ಮಧುಮೇಹ

ಶ್ಯಾಮ ತುಳಸಿ ಟೈಪ್ 2 ಮಧುಮೇಹ ಮತ್ತು ಪ್ರಿ-ಡಯಾಬಿಟಿಸ್ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ. ಹೆಲ್ತ್ ಲೈನ್ ಪ್ರಕಾರ, ಇದರ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಕಡಿಮೆಯಾಗುತ್ತದೆ ಮತ್ತು ಮಧುಮೇಹ ನಿಯಂತ್ರಣವಾಗುತ್ತದೆ.

ಒಣ ಕೆಮ್ಮು

ಒಣ ಕೆಮ್ಮು ಅಥವಾ ಕೆಮ್ಮು ಇದ್ದರೆ ಕೃಷ್ಣ ತುಳಸಿಯಿಂದ ಕೆಮ್ಮಿನ ಸಿರಪ್ ತಯಾರಿಸಬಹುದು. 2-3 ಕೃಷ್ಣ ತುಳಸಿ ಎಲೆಗಳನ್ನು ತೆಗೆದುಕೊಂಡು, 2 ಚಮಚ ಜೇನು, ಒಂದು ಚಿಟಿಕೆ ಶುದ್ಧ ಅರಿಶಿನ ಮತ್ತು ಒಂದು ಚಿಟಿಕೆ ಕರಿಮೆಣಸಿನ ಪುಡಿಯನ್ನು ಸೇರಿಸಿ. ಈ ಮಿಶ್ರಣವನ್ನು ದಿನಕ್ಕೆ 2 ರಿಂದ 3 ಬಾರಿ ಎರಡು ಚಮಚ ತೆಗೆದುಕೊಳ್ಳಬಹುದು. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಈ ಮದ್ದನ್ನು 1-2 ವಾರಗಳವರೆಗೆ ಮಾತ್ರ ಸೇವಿಸಬೇಕು. ಅದಕ್ಕಿಂತ ಹೆಚ್ಚು ಬಾರಿ ಬಳಕೆ ಮಾಡುವಂತಿಲ್ಲ.

ಕೊಲೆಸ್ಟ್ರಾಲ್

ಹೆಲ್ತ್ ಲೈನ್ ಪ್ರಕಾರ, ಪ್ರಾಣಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ, ಶ್ಯಾಮ ತುಳಸಿ ಎಲೆಗಳನ್ನು ಸೇವಿಸುವುದರಿಂದ ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಎಂದು ಕಂಡುಬಂದಿದೆ.

ಸೂಚನೆ:

ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ

VIEW ALL

Read Next Story