ಇತ್ತೀಚೆಗೆ ಬೆಳಗ್ಗಿನ ತಿಂಡಿಗೆ ಕಮಲದ ಕಾಳುಗಳಿಂದ ಮಾಡಿದ ತಿಂಡಿಗಳನ್ನು ತಿನ್ನುವವರನ್ನೂ ಹೆಚ್ಚಾಗಿ ಕಾಣುತ್ತಿದ್ದೇವೆ.
ಬ್ಯಾಕ್ಟೀರಿಯಾ ವಿರೋಧಿ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳಿಂದಾಗಿ ಇದನ್ನು ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸಬಹುದು.
ಅಲ್ಲದೆ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಕ್ಲೋರಿನ್ ಮತ್ತು ಪೊಟ್ಯಾಸಿಯಮ್ ಮುಂತಾದ ಅನೇಕ ಖನಿಜಗಳು ಈ ಹೂವುಗಳಲ್ಲಿ ಲಭ್ಯವಿದೆ.
ಈ ಲೋಟಸ್ ಟೀಯನ್ನು ತೆಗೆದುಕೊಳ್ಳುವುದರಿಂದ ಕಿರಿಕಿರಿ, ತಲೆನೋವು, ಒತ್ತಡ ಮತ್ತು ಜ್ವರದಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ .
ನಿದ್ರಾಹೀನತೆಯಿಂದ ಬಳಲುತ್ತಿರುವವರು ದಿನದಲ್ಲಿ ಕಮಲದ ಚಹಾವನ್ನು ಸೇವಿಸುವುದರಿಂದ ಪರಿಹಾರವನ್ನು ಪಡೆಯಬಹುದು.
ಮುಟ್ಟಿನ ಸಮಯದಲ್ಲಿ ಅತಿಯಾದ ರಕ್ತಸ್ರಾವ ಮತ್ತು ನೋವಿನಿಂದ ಬಳಲುತ್ತಿರುವವರಿಗೆ ಲೋಟಸ್ ಟೀ ವಿಶ್ರಾಂತಿ ನೀಡುತ್ತದೆ.
ಈ ಚಹಾವನ್ನು ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ಹೈಪೊಗ್ಲಿಸಿಮಿಯಾ ಇರುವವರು ಮತ್ತು ಕೆಲವು ರೀತಿಯ ಅಲರ್ಜಿ ಇರುವವರು ತೆಗೆದುಕೊಳ್ಳಬಾರದು.