ಬೇಸಿಗೆಯಲ್ಲಿ ಮೇಕಪ್ ಅನ್ವಯಿಸುವ ಮೊದಲು ತಪ್ಪದೇ ಮಾಡಿ ಈ ಕೆಲಸ
ಬೇಸಿಗೆಯಲ್ಲಿ ಮದುವೆ ಸೇರಿದಂತೆ ಶುಭ ಕಾರ್ಯಗಳು ಹೆಚ್ಚಾಗಿ ನಡೆಯುತ್ತವೆ. ಯಾವುದೇ ಶುಭ ಕಾರ್ಯಗಳಿಗೆ ಹೋಗುವಾಗ ಮೇಕಪ್ ಹಚ್ಚದೆ ಹಾಗೆ ಹೋಗಲು ಸಾಧ್ಯವಿಲ್ಲ, ಆದರೆ, ಶಾಖದಲ್ಲಿ, ಮುಖದ ಮೇಕ್ಅಪ್ ದೀರ್ಘಕಾಲ ಉಳಿಯುವುದಿಲ್ಲ.
ಬೇಸಿಗೆಯಲ್ಲಿ ಮೇಕಪ್ ಮಾಡುವುದರಿಂದ ಸ್ಕಿನ್ ಸಮಸ್ಯೆಗಳು ಕೂಡ ಹೆಚ್ಚಾಗುತ್ತದೆ. ಆದರೆ, ಇದನ್ನು ತಪ್ಪಿಸಲು ಮೇಕಪ್ ಅನ್ವಯಿಸುವಾಗ ಕೆಲವು ಸಿಂಪಲ್ ಸಲಹೆಗಳನ್ನು ಕೈಗೊಳ್ಳುವುದು ತುಂಬಾ ಅಗತ್ಯ. ಅವುಗಳೆಂದರೆ...
ಬೇಸಿಗೆಯಲ್ಲಿ ಮೇಕಪ್ ಹಚ್ಚುವ ಮೊದಲು ತಣ್ಣೀರಿನಿಂದ ಮುಖ ತೊಳೆಯಬೇಕು.
ಬೇಸಿಗೆಯಲ್ಲಿ ಜಲನಿರೋಧಕ ಮೇಕಪ್ ಮಾತ್ರವೇ ಬಳಸಿ.
ಬೇಸಿಗೆಯಲ್ಲಿ ಮೇಕಪ್ ಹಚ್ಚುವಾಗ ಹೆಚ್ಚು ಫೌಂಡೇಶನ್ ಬಳಸಬೇಡಿ. ಏಕೆಂದರೆ ಹೆಚ್ಚು ಬೆವರುವುದರಿಂದ ಇದು ಮುಖದ ಮೇಲಿನ ಕಲೆಗಳಿಗೆ ಕಾರಣವಾಗಬಹುದು.
ಬೇಸಿಗೆಯಲ್ಲಿ ಮೇಕಪ್ ಮಾಡುವಾಗ ಟಾಲ್ಕಮ್ ಪೌಡರ್ ಬಳಸುವುದನ್ನು ಮರೆಯಬೇಡಿ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.