ಪ್ರೇಮಿಗಳ ದಿನದಂದು ನಿಮಗೆ ಸಿಗುವ ಗುಲಾಬಿಗಳ ಸಂಖ್ಯೆಯನ್ನು ನೋಡುವ ಮೂಲಕ, ನಿಮಗೆ ಗುಲಾಬಿ ನೀಡುವವರ ಆಲೋಚನೆಗಳನ್ನು ಅರ್ಥಮಾಡಿಕೊಳ್ಳಬಹುದು. ಗುಲಾಬಿಗಳ ಸಂಖ್ಯೆಯಿಂದ ಸಂಗಾತಿಯ ಹೃದಯದಲ್ಲಿ ಅಡಗಿರುವ ಮಾತನ್ನು ತಿಳಿದುಕೊಳ್ಳಬಹುದು.
ಮೊದಲ ನೋಟದಲ್ಲಿಯೇ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಬಯಸಿದರೆ ಒಂದು ಗುಲಾಬಿಯನ್ನು ಉಡುಗೊರೆಯಾಗಿ ನೀಡಿ.
ನಿಮ್ಮ ಮತ್ತು ನಿಮ್ಮ ಸಂಗಾತಿಗೆ ನಾನು ನಿನ್ನವನು ಎನ್ನುವುದನ್ನು ಅರ್ಥಮಾಡಿ ಸಬೇಕಾದರೆ 2 ಗುಲಾಬಿ ನೀಡಿ.
ನಿಮ್ಮಿಬ್ಬರ ಸಂಬಂಧಕ್ಕೆ ಮೂರು ತಿಂಗಳಾಗಿದ್ದು ಅದರ ನೆನಪಿಗಾಗಿ ನಿಮ್ಮ ಪ್ರೀತಿಗೆ ಗುಲಾಬಿ ನೀಡುವುದಾದರೆ ಮೂರು ಗುಲಾಬಿ ನೀಡಿ.
ಶಾಲೆ, ಕಾಲೇಜು, ಮತ್ತು ಕಚೇರಿಯಲ್ಲಿರುವ ನಿಮ್ಮ ಕ್ರಶ್ ಗೆ ಗುಲಾಬಿ ನೀಡಬೇಕಾದರೆ ಆರು ಗುಲಾಬಿ ನೀಡಿ ನಿಮ್ಮ ಮನಸ್ಸಿನ ಭಾವನೆ ಹೇಳಿಕೊಳ್ಳಿ.
ನಿಮ್ಮ ಸಂಗಾತಿ ಜೀವನ ಪೂರ್ತಿ ನಿಮ್ಮ ಜೊತೆಗಿರಬೇಕು ಎಂದು ನೀವು ಬಯಸಿದರೆ 9 ಗುಲಾಬಿಗಳನ್ನು ಉಡುಗೊರೆಯಾಗಿ ನೀಡಿ.
ನಿಮ್ಮ ಸಂಗಾತಿ ಎಂದೆಂದಿಗೂ ನಿಮ್ಮ ಜೊತೆಯಲ್ಲಿಯೇ ಇರಬೇಕಾದರೆ 12 ಗುಲಾಬಿಗಳನ್ನು ನೀಡಿ.
ನಾನು ಎಂದೆಂದಿಗೂ ನಿಮ್ಮವಳು ಅಥವಾ ನಿಮ್ಮವನು ಎನ್ನುವುದನ್ನು ಸಾಬೀತು ಮಾಡಬೇಕಾದರೆ 24 ಗುಲಾಬಿ ನೀಡಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.