ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಪ್ರತಿಯೊಬ್ಬರೂ ಸುಂದರವಾದ, ಕಪ್ಪು ಮತ್ತು ಬಲವಾದ ಕೂದಲನ್ನು ಹೊಂದಲು ಬಯಸುತ್ತಾರೆ.
ಆದರೆ ಇಂದಿನ ವೇಗದ ಜೀವನಶೈಲಿಯಲ್ಲಿ ನಮ್ಮ ಕೂದಲಿನ ಬಗ್ಗೆ ಸರಿಯಾದ ಗಮನ ಕೊಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಸಂಭವಿಸಲು ಪ್ರಾರಂಭಿಸುತ್ತವೆ.
ಅಂತಹ ಪರಿಸ್ಥಿತಿಯಲ್ಲಿ, ಕೂದಲು ಬೆಳೆಯದೆ ನೀವು ಸಹ ತೊಂದರೆಗೊಳಗಾಗಿದ್ದರೆ, ಚಿಂತಿಸಬೇಕಾಗಿಲ್ಲ. ಏಕೆಂದರೆ ನಿಮ್ಮ ಕೂದಲನ್ನು ಹೇಗೆ ವೇಗವಾಗಿ ಬೆಳೆಯಬಹುದು ಎಂಬುದನ್ನು ನಾವು ಇಲ್ಲಿ ಹೇಳುತ್ತೇವೆ.
ಇದಕ್ಕಾಗಿ ನೀವು ನೀರಿನಲ್ಲಿ ಕೆಲವು ವಸ್ತುಗಳನ್ನು ಬೆರೆಸಿ ಹಚ್ಚಿಕೊಳ್ಳಬಹುದು. ಇದರಿಂದ ನಿಮ್ಮ ಕೂದಲಿನ ಬೆಳವಣಿಗೆಯನ್ನು ತ್ವರಿತವಾಗಿ ಹೆಚ್ಚಿಸಬಹುದು.
ಅಕ್ಕಿ ತಿನ್ನಲು ಎಷ್ಟು ರುಚಿಯಾಗಿರುತ್ತದೆಯೋ ಅಷ್ಟೇ ಕೂದಲಿಗೆ ಕೂಡ ಪ್ರಯೋಜನಕಾರಿ. ಏಕೆಂದರೆ ಇದರಲ್ಲಿರುವ ಅಮೈನೋ ಆಮ್ಲಗಳು, ವಿಟಮಿನ್ ಗಳು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದರಿಂದ ಕೂದಲು ಸ್ಟ್ರಾಂಗ್ ಮತ್ತು ಹೊಳಪನ್ನು ಪಡೆಯುತ್ತದೆ.
ಅರ್ಧ ಕಪ್ ಅಕ್ಕಿಯನ್ನು 3 ಕಪ್ ನೀರಿನಲ್ಲಿ ಬೇಯಿಸಿ, ನಂತರ ನೀರನ್ನು ಫಿಲ್ಟರ್ ಮಾಡಿ, ಅದರಲ್ಲಿ ಕೆಲವು ಹನಿ ತೆಂಗಿನ ಎಣ್ಣೆಯನ್ನು ಬೆರೆಸಿ ಮತ್ತು ನಿಮ್ಮ ಕೂದಲನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ಕೂದಲು ವೇಗವಾಗಿ ಬೆಳೆಯುತ್ತದೆ.
ಕೂದಲಿನ ಹೊಳಪನ್ನು ಹೆಚ್ಚಿಸಲು, ನೈಸರ್ಗಿಕವಾಗಿ ಕೂದಲಿಗೆ ಬಣ್ಣ ಹಚ್ಚುವಲ್ಲಿ ಚಹಾ ಪುಡಿ ಬಳಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಚಹಾ ಪುಡಿ ನೀರನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆಯು ವೇಗವಾಗಿರುತ್ತದೆ.
ಮೂರ ಸ್ಪೂನ್ ಚಹಾ ಪುಡಿಯನ್ನು ನೀರಿಗೆ ಹಾಕಿ ಕುದಿಸಿ, ನಂತರ ನೀರು ತಣ್ಣಗಾದಾಗ, ಅದನ್ನು ಕೂದಪಿಗೆ ಸ್ಪ್ರೇ ಮಾಡಿಕೊಂಡು 30 ನಿಮಿಷಗಳ ನಂತರ ನಿಮ್ಮ ಕೂದಲನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲು ವೇಗವಾಗಿ ಬೆಳೆಯುತ್ತದೆ