ಆಲಂ ಅಥವಾ ಹರಳೆಣ್ಣೆ ಮತ್ತು ಸಾಸಿವೆ ಎಣ್ಣೆಗಳ ಮಿಶ್ರಣದಿಂದ ಮಾಡಿದ ಮನೆಮದ್ದುಗಳು ನಿಮ್ಮ ಕೂದಲಿಗೆ ಮತ್ತು ಚರ್ಮಕ್ಕೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತವೆ.
ಆಲಂನಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತ ನಿವಾರಕ ಗುಣಲಕ್ಷಣಗಳಿವೆ. ಅಷ್ಟೇ ಅಲ್ಲದೆ, ಇದರಲ್ಲಿ ಪ್ರತಿಜೀವಕ, ಆಂಟಿ-ಬ್ಯಾಕ್ಟೀರಿಯಲ್, ಆಂಟಿಫಂಗಲ್ ಗುಣಲಕ್ಷಣಗಳು ಸಹ ಇವೆ.
ಸಾಸಿವೆ ಎಣ್ಣೆ ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು, ಇದು ಆರೋಗ್ಯಕರ ಕೊಬ್ಬುಗಳಾದ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು, ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳು ಮತ್ತು ಒಮೆಗಾ -3ಯನ್ನು ಹೊಂದಿದೆ
ಕೂದಲಿನಿಂದ ಹಿಡಿದು ಚರ್ಮದ ಅನೇಕ ಸಮಸ್ಯೆಗಳಿಗೆ ಈ ಎರಡು ಎಣ್ಣೆಗಳ ಮಿಶ್ರಣ ರಾಮಬಾಣವಾಗಿದೆ.
ಆಲಂ ಮತ್ತು ಸಾಸಿವೆ ಎಣ್ಣೆಯ ಮಿಶ್ರಣವನ್ನು ತಲೆಗೆ ಹಚ್ಚಿದರೆ ಬಿಳಿ ಕೂದಲಿನ ಸಮಸ್ಯೆ ಬುಡಸಮೇತ ಮಾಯವಾಗಿ ಕಪ್ಪಾದ ಕೂದಲು ನಿಮ್ಮದಾಗುತ್ತದೆ.
ಆಲಂ ಮತ್ತು ಸಾಸಿವೆ ಎಣ್ಣೆಯು ತಲೆಹೊಟ್ಟಿನ ಸಮಸ್ಯೆಯನ್ನು ಶೀಘ್ರವೇ ಕಡಿಮೆ ಮಾಡುತ್ತದೆ. ತುರಿಕೆ, ಅಲರ್ಜಿಗಳ ಸಮಸ್ಯೆ ಸಹ ದೂರ ಮಾಡಲು ಸಹಾಯಕವಾಗಿದೆ.
ಆಲಂ ಮತ್ತು ಸಾಸಿವೆ ಎಣ್ಣೆಯ ಮಿಶ್ರಣವು ಚರ್ಮದಲ್ಲಿ ತೇವಾಂಶವನ್ನು ಕಾಪಾಡಲು ಸಹಾಯ ಮಾಡುತ್ತದೆ.
ಆಲಂ ಮತ್ತು ಸಾಸಿವೆ ಎಣ್ಣೆಯನ್ನು ಹಚ್ಚುವ ಮೂಲಕ ಸುಕ್ಕುಗಳು, ಡೆಡ್ ಸ್ಕಿನ್’ಗಳನ್ನು ತೊಡೆದುಹಾಕಬಹುದು
ಕೂದಲು ಉದುರುವಿಕೆಯನ್ನು ತಡೆಗಟ್ಟುವುದರ ಜೊತೆಗೆ, ಆಲಮ್ ಮತ್ತು ಸಾಸಿವೆ ಎಣ್ಣೆಯ ಮಿಶ್ರಣವು ಹೊಸ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮನೆಮದ್ದುಗಳನ್ನು ಆಧರಿಸಿದೆ. ಅನ್ವಯಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ. ಝೀ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ)