ಸಂಖ್ಯಾಶಾಸ್ತ್ರದ ಪ್ರಕಾರ, ಜೀವನದಲ್ಲಿ ಪ್ರತಿಯೊಂದು ಸಂಖ್ಯೆಗಳು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಎಲ್ಲಾ ಸಂಖ್ಯೆಗಳಂತೆ ಮೊಬೈಲ್ ಸಂಖ್ಯೆಯಲ್ಲಿಯೂ ಅದೃಷ್ಟದ ಸಂಖ್ಯೆ ಎಂದಿರುತ್ತದೆ.
ಮೊಬೈಲ್ ಸಂಖ್ಯೆಯ ಒಟ್ಟು ಮೊತ್ತವು ನಿಮ್ಮ ಮೂಲಂಕ ಅಂದರೆ ರಾಡಿಕ್ಸ್ ಸಂಖ್ಯೆಗೆ ಹೊಂದಿಕೆಯಾಗುತ್ತದೆಯೇ ಎನ್ನುವುದನ್ನು ಗಮನಿಸಿ.
ಒಬ್ಬ ವ್ಯಕ್ತಿಯ ಮೊಬೈಲ್ ಸಂಖ್ಯೆ 9891004444 ಆಗಿದ್ದರೆ, ಆ ಸಂಖ್ಯೆಯ ಎಲ್ಲಾ ಅಂಕೆಗಳ ಒಟ್ಟು ಮೊತ್ತ 45 ಆಗಿದ್ದರೆ, 4 + 5 = 9 ಆಗಿರುತ್ತದೆ. ಅದೇ ರೀತಿ ನಿಮ್ಮ ರಾಡಿಕ್ಸ್ ಕೂಡಾ 9 ಆಗಿದ್ದರೆ, ಈ ಸಂಖ್ಯೆ ನಿಮಗೆ ಅದೃಷ್ಟ.
ಸಂಖ್ಯಾಶಾಸ್ತ್ರದ ಪ್ರಕಾರ, 1, 3, 5, 7 ಮತ್ತು 9 ಇದ್ದರೆ ಅದು ಶುಭ. ಆದರೆ 2, 4, 6 ಮತ್ತು 8 ಅಶುಭ.
ಈ ಅಶುಭ ಸಂಖ್ಯೆಗಳಿದ್ದರೆ ಮೊಬೈಲ್ ಪದೇ ಪದೇ ಕೆಟ್ಟುಹೋಗುವ ಸಾಧ್ಯತೆಯಿರುತ್ತದೆ. ಅಲ್ಲದೆ ಜೀವನದಲ್ಲಿಯೂ ಅದೆತ್ಯದೆಗಳು ಎದುರಾಗುತ್ತವೆ.
ಒಂಬತ್ತನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಮೊಬೈಲ್ ನ ಒಟ್ಟು ಮೊತ್ತ 9 ಆಗಿದ್ದರೆ ಅದು ನಿಮಗೆ ಅದೃಷ್ಟ.
ಈ ಸಂಖೆಯ ಮೊಬೈಲ್ ನಿಮ್ಮ ಬಳಿ ಇದ್ದರೆ ಸಂಪತ್ತು ಹೆಚ್ಚಿಸುವಲ್ಲಿ ಸಹಾಯಕವಾಗುತ್ತದೆ. ಇದು ಜ್ಞಾನದ ಸೂಚಕವಾಗಿಯೂ ಕಾರ್ಯ ನಿರ್ವಹಿಸುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.