ಫಿಟ್ನೆಸ್ ಕಾಪಾಡಿಕೊಳ್ಳಲು ಆರೋಗ್ಯಕರ ಅಭ್ಯಾಸಗಳು ತುಂಬಾ ಪ್ರಯೋಜನಕಾರಿ. ಆದರೆ, ನಿಮಗೆ ಜಿಮ್, ಯೋಗ ಮಾಡಲು ಸಾಧ್ಯವಿಲ್ಲದಿದ್ದರೂ ಹೊಟ್ಟೆ ಕರಗಿಸಬಹುದು.
ಮುಂಜಾನೆ ವೇಳೆ ನಮ್ಮ ಕೆಲವು ಅಭ್ಯಾಸಗಳು ಕೂಡ ಆರೋಗ್ಯಕರವಾಗಿ ತೂಕ ಇಳಿಸಲು ತುಂಬಾ ಪ್ರಯೋಜನಕಾರಿ ಆಗಿರುತ್ತವೆ.
ಎದ್ದ ತಕ್ಷಣ ಬಾಯಿ ತೊಳೆಯುವ ಮೊದಲು ತಣ್ಣೀರು ಕುಡಿಯುವುದಕ್ಕಿಂತ ಬೆಚ್ಚಗಿನ ನೀರು ಕುಡಿಯುವುದರಿಂದ ದೇಹದ ಕಲ್ಮಶ ಹೊರಹೋಗಲು, ವೇಗವಾಗಿ ಕ್ಯಾಲೋರಿ ಬರ್ನ್ ಆಗಲು ಸಹಕಾರಿ.
ಉಪಹಾರದಲ್ಲಿ ಹಣ್ಣು, ತರಕಾರಿಗಳಿಂದ ಕೂಡಿದ ಫೈಬರ್ ಭರಿತ ಆಹಾರಗಳನ್ನು ಸೇವಿಸಿದರೆ ಡೊಳ್ಳು ಹೊಟ್ಟೆ ಕರಗಿಸುವುದು ಸುಲಭ.
ಬೆಳಿಗ್ಗೆ ಕಾಫಿ-ಟೀ, ಹಾಲು ಕುಡಿಯುವ ಬದಲಿಗೆ ನಿಮ್ಮ ನೆಚ್ಚಿನ ಫ್ಲೇವರ್ ಇರುವ ಹರ್ಬಲ್ ಟೀ ರೂಢಿಸಿಕೊಳ್ಳಿ. ಇದು ದೇಹದ ಫ್ಯಾಟ್ ಕರಗಿಸಲು ಪ್ರಯೋಜನಕಾರಿ ಆಗಿದೆ.
ಮುಂಜಾನೆ ಬೇಗ ಏಳುವ ಅಭ್ಯಾಸ ರೂಢಿಸಿಕೊಂಡರೆ ಹಲವು ಕಾಯಿಲೆಗಳ ಅಭ್ಯಾಸವನ್ನು ತಪ್ಪಿಸಬಹುದು.
ನೀವು ಜಿಮ್, ವ್ಯಾಯಾಮ ಮಾಡದಿದ್ದರೂ ಬೆಳಿಗ್ಗೆ ಸ್ವಚ್ಛ ವಾತಾವರಣದಲ್ಲಿ ವಾಕಿಂಗ್ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.
ನಿತ್ಯ ಮುಂಜಾನೆ ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ ನೀವು ಜಿಮ್, ವ್ಯಾಯಾಮ ಮಾಡದಿದ್ದರೂ ಸಹ ಸುಲಭವಾಗಿ ಡೊಳ್ಳು ಹೊಟ್ಟೆ ಕರಗಿಸಿ, ಚಪ್ಪಟೆ ಹೊಟ್ಟೆಯನ್ನು ನಿಮ್ಮದಾಗಿಸಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.