ಈ ಎಣ್ಣೆಯನ್ನು ಮನೆಗೆ ತನ್ನಿ: ಇಲಿಗಳ ಕಾಟದಿಂದ ಶಾಶ್ವತ ಮುಕ್ತಿ ಪಡೆಯಲು ಇದೊಂದು ಸಾಕು!

Bhavishya Shetty
Jan 19,2024

ಇಲಿಗಳು

ಮನೆಯಲ್ಲಿ ಇಲಿಗಳು ಕಾಟ ಹೆಚ್ಚಾಗಿ, ಪ್ರತಿಯೊಂದು ವಸ್ತುಗಳನ್ನು ಹಾಳು ಮಾಡುತ್ತವೆಯೇ? ಹಾಗಿದ್ದರೆ, ನಾವಿಂದು ಕೆಲ ಟಿಪ್ಸ್’ಗಳನ್ನು ಹೇಳಲಿದ್ದೇವೆ. ಇದನ್ನು ಟ್ರೈ ಮಾಡಿದರೆ ಇಲಿಗಳು ಓಡಿಹೋಗುತ್ತವೆ.

ಪುದೀನಾ

ಇಲಿಗಳನ್ನು ಓಡಿಸಲು ಪುದೀನಾ ಪ್ರಮುಖ ಪರಿಹಾರವಾಗಿದೆ. ಇಲಿಗಳು ಬರುವ ಕಡೆ ಪುದೀನಾ ಸ್ಪ್ರೇ ಬಳಸಿ. ಇಲಿಗಳು ಅದರ ವಾಸನೆಯನ್ನು ಇಷ್ಟಪಡುವುದಿಲ್ಲ, ಹಾಗಾಗಿ ತಕ್ಷಣವೇ ಓಡಿಹೋಗುತ್ತವೆ.

ತಂಬಾಕು

ತಂಬಾಕು ಮತ್ತು ಬೇಳೆ ಕಾಳುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ತಂಬಾಕು ಆರೋಗ್ಯಕ್ಕೆ ಹಾನಿಕಾರಕವಾಗಿದ್ದರೂ, ಇಲಿಗಳಿಗೆ ಭಯ ಹುಟ್ಟಿಸಲು ಇದು ಬೆಸ್ಟ್. ತಂಬಾಕಿನಲ್ಲಿ ಕಂಡುಬರುವ ಅಮಲು ಪದಾರ್ಥವು ಇಲಿಗಳನ್ನು ಕೆರಳಿಸುತ್ತದೆ. ಹೀಗಾಗಿ ತಕ್ಷಣವೇ ಅಲ್ಲಿಂದ ಓಡಿಹೋಗುತ್ತವೆ.

ಹರಳೆಣ್ಣೆ

ಆಲಂ ಅಥವಾ ಹರಳೆಣ್ಣೆ ಇಲಿಗಳ ಪಾಲಿಗೆ ಶತ್ರು. ಹರಳೆಣ್ಣೆ ಪುಡಿಯ ದ್ರಾವಣವನ್ನು ತಯಾರಿಸಿ ಇಲಿಗಳು ಬರುವ ಜಾಗಗಳಲ್ಲಿ ಸಿಂಪಡಿಸಿ. ಹೀಗೆ ಮಾಡಿದರೆ ಶಾಶ್ವತವಾಗಿ ಓಡಿ ಹೋಗುತ್ತವೆ.

ಮೆಣಸಿನ ಪುಡಿ

ಇಲಿಗಳು ಬಂದು ಹೋಗುವ ಸ್ಥಳಗಳಲ್ಲಿ ಕೆಂಪು ಮೆಣಸಿನ ಪುಡಿಯನ್ನು ಸಿಂಪಡಿಸಿ. ಇದನ್ನು ಕಂಡಾಗ ಮತ್ತೆ ಆ ಸ್ಥಳಕ್ಕೆ ಬರಲು ಇಲಿಗಳು ಧೈರ್ಯ ಮಾಡುವುದಿಲ್ಲ.

ಕರ್ಪೂರ

ಇಲಿಗಳು ಕರ್ಪೂರವನ್ನು ಇಷ್ಟಪಡುವುದಿಲ್ಲ. ಅವುಗಳ ಉಸಿರಾಟಕ್ಕೆ ಕರ್ಪೂರದ ಪರಿಮಳ ಸಮಸ್ಯೆಯನ್ನುಂಟು ಮಾಡುತ್ತದೆ. ಹೀಗಾಗಿ ಮನೆಯ ಪ್ರತಿಯೊಂದು ಮೂಲೆಯಲ್ಲಿ ಕರ್ಪೂರದ ತುಂಡುಗಳನ್ನು ಇರಿಸಿ. ಹೀಗೆ ಮಾಡುವುದರಿಂದ ಇಲಿಗಳು ತಾನಾಗಿಯೇ ಮನೆ ಬಿಟ್ಟು ಹೋಗುತ್ತವೆ.

VIEW ALL

Read Next Story