ಬೇಸಿಗೆಯಲ್ಲಿ ಬಿಸಿಲಿನ ಝಳಕ್ಕೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ದೇಹದಲ್ಲಿ ನೀರಿನ ಅಂಶವನ್ನು ಕಾಪಾಡುವುದಕ್ಕೆ ಕೆಲವು ಹಣ್ಣುಗಳನ್ನು ಸೇವಿಸಬಹುದು.
ಕಲ್ಲಂಗಡಿ ಹಣ್ಣಿನಲ್ಲಿ ಶೇ 90 ರಷ್ಟು ನೀರಿನ ಅಂಶವಿರುತ್ತದೆ. ಅಲ್ಲದೆ ಪೊಟ್ಯಾಶಿಯಂ, ವಿಟಮಿನ್ ಎ , ಬಿ೬ , ಕೂಡಾ ಇರುತ್ತದೆ.
ಅನಾನಾಸು ಹಣ್ಣಿನಲ್ಲಿ ಶೇ ೮೭ರಷ್ಟು ನೀರಿನ ಅಂಶ ವಿರುತ್ತದೆ. ಇದು ದೇಹದ ನೀರಿನ ಕೊರತೆಯನ್ನು ನೀಗಿಸುತ್ತದೆ.
ಹಣ್ಣುಗಳ ರಾಜ ಮಾವಿನಲ್ಲಿ ಶೇ 80 ರಷ್ಟು ನೀರಿರುತ್ತದೆ. ಇದರ ಸೇವನೆಯಿಂದ ದೇಹಕ್ಕೆ ಅಗತ್ಯ ನೀರು ಸಿಗುತ್ತದೆ.
ಸೇಬು ಹಣ್ಣಿನಲ್ಲಿಯು ಶೇ 86 ರಷ್ಟು ನೀರು ಇರುತ್ತದೆ. ಇದರಲ್ಲಿ ಅನೇಕ ರೀತಿಯ ಮಿನರಲ್ ಕೂಡಾ ಇರುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಸೌತೆಕಾಯಿಯಲ್ಲಿ ೯೬ ಶೇ ದಷ್ಟು ನೀರಿನ ಅಂಶವಿರುತ್ತದೆ. ಇದು ದೇಹವನ್ನು ಹೈಡ್ರೇಡ್ ಆಗಿ ಇಡುತ್ತದೆ.
ಸ್ಟ್ರಾಬೇರಿಯಲ್ಲಿ ಶೇ 90 ರಷ್ಟು ನೀರಿರುತ್ತದೆ.
ಬೇಸಿಗೆಯಲ್ಲಿ ದೇಹವನ್ನು ತಂಪಾಗಿಟ್ಟುಕೊಳ್ಳಲು ಮತ್ತು ದೇಹದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲು ಕಿತ್ತಳೆ ಬೆಸ್ಟ್ ಹಣ್ಣು.