ನೀವು ಕಾಂತಿಯುತ ತ್ವಚೆಯನ್ನು ಹೊಂದಲು ಸುಲಭವಾಗಿ ಲಭ್ಯವಿರುವ ಕೆಲವು ವಸ್ತುಗಳು ಪ್ರಯೋಜನಕಾರಿ ಆಗಿದೆ.
ಹಾಲಿನ ಕೆನೆಯಲ್ಲಿ ಚಿಟಿಕೆ ಅರಿಶಿನ ಬೆರೆಸಿ ಮುಖಕ್ಕೆ ಹಚ್ಚುವುದು ತ್ವಚೆಯ ಆರೋಗ್ಯವನ್ನು ಸುಧಾರಿಸುತ್ತದೆ.
ನಂಜು ನಿರೋಧಕಗಳಿಂದ ಸಮೃದ್ಧವಾಗಿರುವ ಬೇವಿನ ಎಲೆ ಪೇಸ್ಟ್ ಮುಖಕ್ಕೆ ಹಚ್ಚುವುದರಿಂದ ಮೊಡವೆ, ಕಲೆ ನಿವಾರಣೆಯಾಗುತ್ತದೆ.
ಶ್ರೀಗಂಧದ ಪುಡಿಯನ್ನು ರೋಸ್ ವಾಟರ್ ಜೊತೆಗೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಚರ್ಮದ ಸಮಸ್ಯೆಗಳು ನಿವಾರಣೆಯಾಗಿ ನೈಸರ್ಗಿಕವಾಗಿ ಹೊಳೆಯುವ ತ್ವಚೆ ನಿಮ್ಮದಾಗಿಸಬಹುದು.
ಅಲೋವೆರಾ ಜೆಲ್ ಅನ್ನು ಚರ್ಮಕ್ಕೆ ಲೇಪಿಸುವುದರಿಂದ ಇದು ಶುಷ್ಕ ಚರ್ಮವನ್ನು ತೇವಗೊಳಿಸುವುದರ ಜೊತೆಗೆ ಮೊಡವೆ, ಕಲೆಗಳನ್ನು ನಿವಾರಿಸಲು ಕೂಡ ಪ್ರಯೋಜನಕಾರಿ ಆಗಿದೆ.
ತೆಂಗಿನೆಣ್ಣೆಯಲ್ಲಿ ತ್ವಚೆಗೆ ಅಗತ್ಯವಾದ ಹಲವು ಪೋಷಕಾಂಶಗಳು ಅಡಕವಾಗಿದ್ದು, ಒಂದು ಹನಿ ತೆಂಗಿನೆಣ್ಣೆಯನ್ನು ಬಳಸಿ ಮುಖಕ್ಕೆ ಲಘು ಮಸಾಜ್ ಮಾಡುವುದರಿಂದ ನೈಸರ್ಗಿಕ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.
ಮೊಸರಿನಲ್ಲಿ ಅಡಕವಾಗಿರುವ ಪ್ರೋಬಯಾಟಿಕ್‌ಗಳು ಚರ್ಮದ ಮೇಲ್ಮೈಯಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಬೆಂಬಲಿಸುತ್ತದೆ. ಇದಕ್ಕಾಗಿ ಮೊಸರಿನ ಫೇಸ್ ಮಾಸ್ಕ್ ಲೇಪಿಸುವುದು ಲಾಭದಾಯಕವಾಗಿದೆ.
ಮುಲ್ತಾನಿ ಮಿಟ್ಟಿಯನ್ನು ರೋಸ್ ವಾಟರ್ ನಲ್ಲಿ ಬೆರೆಸಿ ಫೇಸ್ ಮಾಸ್ಕ್ ಆಗಿ ಬಳಸುವುದರಿಂದ ಎಣ್ಣೆಯುಕ್ತ ಚರ್ಮವನ್ನು ನಿವಾರಿಸಿ ಚರ್ಮದ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.