ಆಲೂಗಡ್ಡೆ ರಸದಲ್ಲಿ ಇದನ್ನು ಬೆರೆಸಿ ಹಚ್ಚಿದರೆ.. 10 ನಿಮಿಷದಲ್ಲಿ ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತೆ ಬಿಳಿ ಕೂದಲು!
ಕೂದಲಿನ ಹಲವು ಸಮಸ್ಯೆಗಳನ್ನು ಆಲೂಗಡ್ಡೆ ರಸದ ಮೂಲಕ ಗುಣಪಡಿಸಬಹುದು. ಇದು ಬಿಳಿ ಕೂದಲನ್ನು ಮರಳಿ ಕಪ್ಪಾಗಿಸಲು ಸಹಾಯಕವಾಗಿದೆ.
ಬಿಳಿ ಕೂದಲು ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ಕೆಲವು ಮನೆಮದ್ದುಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಆಲೂಗಡ್ಡೆ ರಸವು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಇದು ನೆತ್ತಿಯನ್ನು ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಆಲೂಗಡ್ಡೆ ರಸ ಮತ್ತು ಮೊಸರಿನ ಮಿಶ್ರಣವನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನ ಬೇರುಗಳು ಗಟ್ಟಿಯಾಗುತ್ತವೆ.
ಆಲೂಗೆಡ್ಡೆ ರಸವನ್ನು ತೆಗೆದುಕೊಂಡು ಇದಕ್ಕೆ 2 ರಿಂದ ನ3 ಚಮಚ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಮಿಶ್ರಣಕ್ಕೆ ಸ್ವಲ್ಪ ಕಾಫಿ ಪುಡಿ ಬೆರಸಿ ಚೆನ್ನಾಗಿ ಕಲಿಸಿ.
ಈ ಪೇಸ್ಟ್‌ನಿಂದ ಕೂದಲಿನ ಬುಡ ಮತ್ತು ನೆತ್ತಿಯನ್ನು ಮಸಾಜ್ ಮಾಡಿ. ಒಂದು ಗಂಟೆ ಇರಿಸಿ ನಂತರ ಸೌಮ್ಯವಾದ ಶಾಂಪೂ ಸಹಾಯದಿಂದ ತೊಳೆಯಿರಿ.
ಈ ಹೇರ್ ಮಾಸ್ಕ್ ಅನ್ನು ತಿಂಗಳಿಗೆ 3 ಬಾರಿ ಹಾಕುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ. ಜೊತೆಗೆ ತಲೆಹೊಟ್ಟು ಸಹ ನಿವಾರಣೆಯಾಗುತ್ತದೆ.
ಆಲೂಗಡ್ಡೆ ವಿಟಮಿನ್ ಬಿ, ಸಿ, ಸತು ಮತ್ತು ಕಬ್ಬಿಣವನ್ನು ಹೊಂದಿರುತ್ತದೆ. ಇದು ಕೂದಲಿಗೆ ಪೋಷಣೆ ನೀಡುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.