ನೈಸರ್ಗಿಕ ಸ್ಕ್ರಬ್ ಟೊಮಾಟೊ ಬಳಸಿ ಸುಂದರ ಕಾಂತಿಯುತ ತ್ವಚೆ ನಿಮ್ಮದಾಗಿಸಿ
ಟೊಮಾಟೊ ಕೇವಲ ಆಹಾರದ ರುಚಿ ಹೆಚ್ಚಿಸುವುದಷ್ಟೇ ಅಲ್ಲ, ನಿಮ್ಮ ಸೌಂದರ್ಯವನ್ನು ಸಹ ಹೆಚ್ಚಿಸುತ್ತದೆ. ಹಾಗಾಗಿಯೇ ಟೊಮಾಟೊವನ್ನು ನ್ಯಾಚುರಲ್ ಸ್ಕ್ರಬ್ ಎಂದು ಹೇಳಲಾಗುತ್ತದೆ.
ಟೊಮಾಟೊ ರಸವನ್ನು ಫೇಸ್ ಪ್ಯಾಕ್ ರೀತಿಯಲ್ಲಿ ಬಳಸುವುದರಿಂದ ಇದು ಚರ್ಮದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಅವುಗಳೆಂದರೆ...
ಟೊಮೆಟೊದಲ್ಲಿ ವಿಟಮಿನ್ ಸಿ, ಎ ಕಂಡು ಬರುತ್ತದೆ. ಟೊಮಾಟೊವನ್ನು ಎರಡು ಭಾಗ ಮಾಡಿ, ವೃತ್ತಾಕಾರದಲ್ಲಿ ಹತ್ತು ನಿಮಿಷಗಳ ಕಾಲ ಮುಖಕ್ಕೆ ಮಸಾಜ್ ಮಾಡಿದರೆ ಇದು ಮೊಡವೆಗಳಿಂದ ಪರಿಹಾರ ನೀಡುತ್ತದೆ.
ಟೊಮಾಟೊವನ್ನು ಎರಡು ತುಂಡು ಮಾಡಿ ಅದರಲ್ಲಿ ಸಕ್ಕರೆ ಬೆರೆಸಿ ಅದರ ಸಹಾಯದಿಂದ ಲಘುವಾಗಿ ಮಸಾಜ್ ಮಸಾಜ್ ಮಾಡುವುದರಿಂದ ಡೆಡ್ ಸ್ಕಿನ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಎರಡು ಚಮಚ ಟೊಮಾಟೊ ರಸದಲ್ಲಿ ಎರಡು ಚಮಚ ನಿಂಬೆ ರಸವನ್ನು ಬೆರೆಸಿ ಮುಖಕ್ಕೆ ಲೇಪಿಸಿ 15 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಸಾಮಾನ್ಯ ನೀರಿನಿಂದ ಫೇಸ್ ವಾಶ್ ಮಾಡುವುದರಿಂದ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.
ನೀವು ಬಿಸಿಲಿನಲ್ಲಿ ಹೋಗಿ ಚರ್ಮ ಕಳೆ ಗುಂದಿದ್ದರೆ ಅರ್ಧ ಕಪ್ ಮೊಸರಿನಲ್ಲಿ ಒಂದು ತಾಜಾ ಟೊಮಾಟೊ ಹಾಕಿ ರುಬ್ಬಿ, ಈ ಮಿಶ್ರಣವನ್ನು ಚರ್ಮಕ್ಕೆ ಲೇಪಿಸಿ. ಇದರಿಂದ ಸನ್ ಬರ್ನ್ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ.
ಎರಡು ಸ್ಪೂನ್ ಸೌತೆಕಾಯಿ ರಸವನ್ನು, 2 ಚಮಚ ಟೊಮಾಟೊ ರಶದೊಂದಿಗೆ ಬೆರೆಸಿ ಇದನ್ನು ಮುಖಕ್ಕೆ ಹಚ್ಚಿ, 15 ನಿಮಿಷಗಳ ನಂತರ ಮುಖ ತೊಳೆಯಿರಿ. ಇದರಿಂದ ಎಣ್ಣೆಯುಕ್ತ ಚರ್ಮದಿಂದ ಪರಿಹಾರ ಪಡೆಯಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.