ಆಟವಾಡುವಾಗ ಮಗು ಇತರ ಮಕ್ಕಳೊಂದಿಗೆ ಜಗಳವಾಡುವ ಪ್ರವೃತ್ತಿ ಹೊಂದಿದ್ದರೆ ಈ ಸ್ವಭಾವವನ್ನು ನಯವಾಗಿ ತಿದ್ದಿ, ಮಕ್ಕಳಿಗೆ ಸರಿ-ತಪ್ಪುಗಳನ್ನು ಅರ್ಥ ಮಾಡಿಸಿ.
ಚಿಕ್ಕ ಮಕ್ಕಳು ಹಠಮಾಡುವುದು ಸ್ವಾಭಾವಿಕ. ಆದರೆ, ಮಕ್ಕಳಲ್ಲಿ ಈ ಸ್ವಭಾವಕ್ಕೆ ಮಣೆ ಹಾಕಬೇಡಿ. ಇಲ್ಲದಿದ್ದರೆ, ಮಕ್ಕಳು ಇದನ್ನೇ ರೂಢಿಸಿಕೊಂಡು ಬಿಡುತ್ತಾರೆ.
ಮಗು ನಿಮ್ಮ ಮಾತನ್ನು ಕೇಳದೆ ತನ್ನ ಸ್ವಂತ ಇಚ್ಛೆಯನ್ನು ಅನುಸರಿಸುತ್ತಿದ್ದರೆ ಅದು ಒಳ್ಳೆಯದಲ್ಲ. ಇದನ್ನು ಚಿಕ್ಕ ಚಿಕ್ಕ ವಿಷಯಗಳಲ್ಲಿ ಕಾಣಬಹುದು. ಇದರಲ್ಲಿ ಮುಖ್ಯವಾಗಿ ಮಕ್ಕಳ ಎದುರುತ್ತರ ನೀಡುವ ಸ್ವಭಾವವನ್ನು ಯಾವುದೇ ಕಾರಣಕ್ಕೂ ಬೆಂಬಲಿಸಬೇಡಿ.
ಮಕ್ಕಳು ಚಿಕ್ಕವರಿದ್ದಾಗ ತಮ್ಮ ತಂದೆ-ತಾಯಿಯ ಮಾತುಗಳನ್ನು ಬಹಳ ಎಚ್ಚರಿಕೆಯಿಂದ ಕೇಳುತ್ತಾರೆ, ಆದರೆ ಅವರು ಬೆಳೆದಂತೆ ಅನೇಕ ವಿಷಯಗಳನ್ನು ಕಲಿಯುತ್ತಾರೆ. ನಂತರದಲ್ಲಿ ಅವರು ಕೆಲವು ವಿಷಯಗಳಿಗಷ್ಟೇ ಅರ್ಥಾತ್ ತಮಗೆ ಬೇಕಾದಕ್ಕೆ ಮಾತ್ರ ಪ್ರತಿಕ್ರಿಯಿಸುತ್ತಾರೆ. ಈ ಸ್ವಭಾವವನ್ನು ಬದಲಾಯಿಸಿ.
ಮಕ್ಕಳು ಹೃದಯದಲ್ಲಿ ತುಂಬಾ ಪ್ರಾಮಾಣಿಕರಾಗಿದ್ದರೂ, ಅವರು ಕ್ರಮೇಣ ಸಮಾಜದ ಮಾರ್ಗಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅಳವಡಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಆದರೆ, ಕೆಲವೊಮ್ಮೆ ಅವರು ತಮ್ಮ ತಪ್ಪನ್ನು ಮರೆಮಾಚಲು ಬೇರೆಯವರನ್ನು ದೂಷಿಸುತ್ತಾರೆ. ಮಕ್ಕಳಲ್ಲಿ ಈ ತಪ್ಪು ನಡವಳಿಕೆ ಮುಂದುವರೆಯಲು ಬಿಡಬೇಡಿ.
ಕೆಲವು ಮಕ್ಕಳು ಹಿರಿಯರೊಂದಿಗೆ ಮಾತನಾಡುವಾಗಲೂ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅಸಭ್ಯವಾಗಿ ಪ್ರತಿಕ್ರಿಯಿಸುತ್ತಾರೆ. ಈ ಸ್ವಭಾವವನ್ನು ಮೊಳಕೆಯಲ್ಲೇ ಚಿವುಟುವುದು ಉತ್ತಮ.
ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಇತರರ ಭಾವನೆಗಳನ್ನು ಗೌರವಿಸಲು ಅವರಿಗೆ ಕಲಿಸದಿದ್ದರೆ ಮಕ್ಕಳು ಬೇರೆಯವರ ಬಗ್ಗೆ ಚಿಂತಿಸುವುದಿಲ್ಲ. ಅವರ ಈ ವರ್ತನೆಯಿಂದಾಗಿ ಭವಿಷ್ಯದಲ್ಲಿ ಅವರು ಬೇರೆಯವರಿಗೆ ಗೌರವ ನೀಡುವುದನ್ನು ಕೂಡ ಕಲಿಯುವುದಿಲ್ಲ.
ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.