ನಿಮ್ಮ ಸಂಪಾದನೆ ಬಗ್ಗೆ ಯಾವುದೇ ಸಂದರ್ಭದಲ್ಲಿ ಸ್ನೇಹಿತರೊಂದಿಗಾಗಲಿ ಅಥವಾ ಸಂಬಂಧಿಕರೊಂದಿಗಾಗಲಿ ಚರ್ಚಿಸಬಾರದು.
ಮನೆ ಎಂದ ಮೇಲೆ ಜಗಳ ಸಾಮಾನ್ಯ. ಆದರೆ, ಈ ವಿಚಾರವನ್ನು ಯಾರೊಂದಿಗೂ ಅದರಲ್ಲೂ ಕುಟುಂಬದವರಲ್ಲದವರೊಂದಿಗೆ/ ಹೊರಗಿನ ವ್ಯಕ್ತಿಗಳೊಂದಿಗೆ ಕೌಟುಂಬಿಕ ವಿಚಾರಗಳನ್ನು ಹಂಚಿಕೊಳ್ಳಬಾರದು.
ದಾಖಲೆಗಳಿಗೆ ಹೊರತುಪಡಿಸಿ ಬೇರೆಯವರೊಂದಿಗೆ ನಮ್ಮ ವಯಸ್ಸಿನ ಬಗ್ಗೆ ಚರ್ಚಿಸಬಾರದು
ಎಡಗೈನಲ್ಲಿ ಕೊಟ್ಟ ದಾನ ಬಲಗೈಗೆ ಗೊತ್ತಾಗಬಾರದು ಎಂಬ ಮಾತಿದೆ. ಹಿರಿಯರ ಸಲಹೆಗಾ ಪ್ರಕಾರ, ನಾವು ಯಾರಿಗಾದರೂ ದಾನ ಮಾಡಿದರೆ ಈ ವಿಚಾರವನ್ನು ಯಾರೊಂದಿಗೂ ಹೇಳಬಾರದು. ಇದರಿಂದ ದಾನ ಮಾಡಿದ ಫಲ ದೊರೆಯುವುದಿಲ್ಲ ಎನ್ನಲಾಗುತ್ತದೆ.
ಜೀವನದಲ್ಲಿ ನಮಗೆ ಸಿಗುವ ಕೀರ್ತಿ, ಸನ್ಮಾನಗಳ ಬಗ್ಗೆ ನಾವಾಗಿಯೇ ಯಾರೊಂದಿಗೂ ಹಂಚಿಕೊಳ್ಳಬಾರದು. ಎಲ್ಲರ ಮನಸ್ಥಿತಿ ಒಂದೇ ಆಗಿರದ ಕಾರಣ ನಮ್ಮ ಏಳ್ಗೆಯನ್ನು ಸಹಿಸುವುದಿಲ್ಲ.
ಜೀವನದಲ್ಲಿ ಕಷ್ಟ-ಸುಖ, ಏಳು-ಬೀಳು ಸರ್ವೇ ಸಾಮಾನ್ಯ. ಆದರೆ, ಎಂದಿಗೂ ಸಹ ಅವಮಾನದ ಬಗ್ಗೆ ಬರೆಯವರೊಂದಿಗೆ ಹೇಳಿಕೊಳ್ಳಬಾರದು. ಏಕೆಂದರೆ, ಬದಲಾದ ಸಂದರ್ಭಗಳಲ್ಲಿ ನಿಮ್ಮ ಮಿತ್ರರೇ ನಿಮ್ಮನ್ನು ಅವಮಾನಿಸಬಹುದು.
ನಿಮ್ಮಲ್ಲಿರುವ ಆಸ್ತಿಯ ಬಗ್ಗೆ ಎಲ್ಲರೊಂದಿಗೆ ಹೇಳಿಕೊಳ್ಳಬಾರದು. ಏಕೆಂದರೆ ಸಮಾಜದಲ್ಲಿ ಎಲ್ಲರೂ ಒಳ್ಳೆಯವರೇ ಇರುವುದಿಲ್ಲ.