ವಯಸ್ಸಾದಂತೆ, ಮುಖದ ಮೇಲೆ ಸೂಕ್ಷ್ಮ ಗೆರೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಹೊಳಪು ಕಣ್ಮರೆಯಾಗುತ್ತದೆ. ರಾತ್ರಿ ಮಲಗುವ ಮುನ್ನ ಕೆಲವು ತ್ವಚೆಯ ಆರೈಕೆ ಸಲಹೆಗಳ ಸಹಾಯದಿಂದ ಮುಖದ ಹೊಳಪನ್ನು ಕಾಪಾಡಿಕೊಳ್ಳಬಹುದು.
ರಾತ್ರಿ ನಿತ್ಯ ಸ್ಕಿನ್ ಕೇರ್ ರುಟೀನ್ ಅಭ್ಯಾಸ ಮಾಡಿಕೊಂಡರೆ ಮುಖದ ಕಾಂತಿ ಹೆಚ್ಚುತ್ತಲೇ ಹೋಗುತ್ತದೆ.
ರಾತ್ರಿ ಮಲಗುವ ಮುನ್ನ ತ್ವಚೆಯ ಆರೈಕೆ ಬಹಳ ಮುಖ್ಯ. ಇದಕ್ಕಾಗಿ ಮಲಗುವ ಮುನ್ನ ಶುದ್ದ ನೀರಿನಿಂದ ಮುಖ ತೊಳೆದುಕೊಳ್ಳಿ.
ರಾತ್ರಿ ಮುಖಕ್ಕೆ ಬಳಸುವ ಹರ್ಬಲ್ ಫೇಸ್ ಮಾಸ್ಕ್ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ರಾತ್ರಿ ಕಣ್ಣಿನ ಮೇಲೆ ಕ್ರೀಂ ಹಚ್ಚಬೇಕು. ಕಣ್ಣಿನ ಕೆಳಗಿನ ಚರ್ಮ ಬಹಳ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಅದರ ಆರೈಕೆ ಕೂಡಾ ಬಹಳ ಮುಖ್ಯವಾಗಿರುತ್ತದೆ.
ದಿನವಿಡೀ ದಣಿದ ನಂತರ ತ್ವಚೆ ಒಣಗಿ ಹೋಗುತ್ತದೆ. ಹಾಗಾಗಿ ರಾತ್ರಿ ಮಲಗುವ ಮುನ್ನ ಮುಖಕ್ಕೆ ಲೋಶನ್ ಹಚ್ಚುವುದನ್ನು ಮರೆಯಬೇಡಿ.
ರಾತ್ರಿ ಮಲಗುವ ಮುನ್ನ ಸೌತೆಕಾಯಿಯನ್ನು ಗ್ರೇಟ್ ಮಾಡಿಕೊಂಡು ಮುಖದ ಮೇಲೆ ಹಚ್ಚಿ.
ತ್ವಚೆ ಮಾತ್ರವಲ್ಲ ರಾತ್ರಿ ಕೂದಲಿನ ಆರೋಗ್ಯದ ಬಗ್ಗೆ ಗಮನ ವಹಿಸುವುದು ಕೂಡಾ ಬಹಳ ಮುಖ್ಯ.
ಈ ಎಲ್ಲಾ ಕಾರಣಗಳಿಂದ ರಾತ್ರಿ ಮಲಗುವ ಮುನ್ನ ತ್ವಚೆಯ ಆರೋಗ್ಯ ನೋಡಿಕೊಳ್ಳಬೇಕು.