ಬಾಳೆಹಣ್ಣಷ್ಟೇ ಅಲ್ಲ ಅದರ ಸಿಪ್ಪೆಯಿಂದಲೂ ಆರೋಗ್ಯಕ್ಕಿದೆ ಅದ್ಭುತ ಪ್ರಯೋಜನಗಳು

Published by: Yashaswini V | Dec 15, 2023

ಬಾಳೆಹಣ್ಣು

ಬಾಳೆಹಣ್ಣು ಮಾತ್ರವಲ್ಲ, ಅದರ ಸಿಪ್ಪೆಯೂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬಾಳೆಹಣ್ಣಿನ ಸಿಪ್ಪೆಯ ಪ್ರಯೋಜನಗಳನ್ನು ತಿಳಿದರೆ ನೀವು ಎಂದಿಗೂ ಸಿಪ್ಪೆಯನ್ನು ಎಸೆಯುವ ಆಲೋಷಣೆಯನ್ನೂ ಮಾಡುವುದಿಲ್ಲ. ಅವುಗಳೆಂದರೆ...

Published by: Yashaswini V | Dec 15, 2023

ಹಳದಿ ಹಲ್ಲುಗಳು

ದಿನಕ್ಕೆರಡು ಬಾರಿ ಬಾಳೆಹಣ್ಣಿನ ಸಿಪ್ಪೆಯನ್ನು ನಿಮ್ಮ ಹಲ್ಲುಗಳಿಗೆ ಉಜ್ಜುವುದರಿಂದ ಹಳದಿ ಹಲ್ಲಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

Published by: Yashaswini V | Dec 15, 2023

ಚರ್ಮದ ಆರೋಗ್ಯ

ಬಾಳೆಹಣ್ಣಿನ ಸಿಪ್ಪೆಯಲ್ಲಿ ನೈಸರ್ಗಿಕ ತೇವಾಂಶ ಕಂಡು ಬರುತ್ತದೆ. ಇದರಿಂದ ಮುಖಕ್ಕೆ ಮಸಾಜ್ ಮಾಡುವುದರಿಂದ ಅಲರ್ಜಿಗಳು, ಮೊಡವೆಗಳು ಮತ್ತು ಸೋಂಕುಗಳಿಂದ ರಕ್ಷಣೆ ಪಡೆಯಬಹುದು.

Published by: Yashaswini V | Dec 15, 2023

ನರಹುಲಿ

ರಾತ್ರಿ ಮಲಗುವ ಮೊದಲು ಬಾಳೆಹಣ್ಣಿನ ಸಿಪ್ಪೆಯನ್ನು ನರಹುಲಿಯ ಮೇಲೆ ಅನ್ವಯಿಸಿ. ಬೆಳಿಗ್ಗೆ ಎದ್ದು ಸಾಮಾನ್ಯ ನೀರಿನಿಂದ ಅದನ್ನು ವಾಶ್ ಮಾಡಿ. ನಿಯಮಿತವಾಗಿ ಈ ರೀತಿ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ನರಹುಲಿ ಕಣ್ಮರೆಯಾಗುತ್ತದೆ.

Published by: Yashaswini V | Dec 15, 2023

ಬೂಟ್ ಪಾಲೀಶ್

ಬಾಳೆಹಣ್ಣಿನ ಸಿಪ್ಪೆಯನ್ನು ಬಳಸಿ ಬೂಟ್ ಪಾಲೀಶ್ ಮಾಡಬಹುದು. ಇದರಿಂದ ಬೂಟುಗಳು ಫಳ ಫಳ ಹೊಳೆಯುತ್ತವೆ.

Published by: Yashaswini V | Dec 15, 2023

ಸುಕ್ಕು ನಿವಾರಣೆ

ಬಾಳೆಹಣ್ಣಿನ ಸಿಪ್ಪೆಯನ್ನು ರುಬ್ಬಿ ಮೊಟ್ಟೆಯ ಹಳದಿ ಲೋಳೆಯಲ್ಲಿ ಬೆರೆಸಿ. ಇದನ್ನು ಮುಖಕ್ಕೆ ಹಚ್ಚಿ 10-15 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ. ಇದರಿಂದ ಸುಕ್ಕುಗಳನ್ನು ನಿವಾರಿಸಬಹುದು.

Published by: Yashaswini V | Dec 15, 2023

ಕಣ್ಣುಗಳ ಆರೋಗ್ಯ

ಬಾಳೆಹಣ್ಣಿನ ಸಿಪ್ಪೆಯನ್ನು ಕಣ್ಣಿನ ಮೇಲೆ ಸ್ವಲ್ಪ ಸಮಯ ಇಡಿ. ಈ ರೀತಿ ಮಾಡುವುದರಿಂದ ಬಾಳೆಹಣ್ಣಿನ ಸಿಪ್ಪೆಯು UV ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸುತ್ತದೆ.

Published by: Yashaswini V | Dec 15, 2023

ಸೂಚನೆ

ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

Published by: Yashaswini V | Dec 15, 2023

VIEW ALL

Read Next Story