ದೀಪಾವಳಿಗೆ ಒಂದು ತಿಂಗಳ ಮೊದಲು ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಲು ಪ್ರಾರಂಭಿಸುತ್ತಾರೆ. ಈ ಸಮಯದಲ್ಲಿ, ಕೊಳಕು ಸೋಫಾಗಳು ಮತ್ತು ಪಾತ್ರೆಗಳನ್ನು ಸ್ವಚ್ಛಗೊಳಿಸಲು ಕಷ್ಟವಾಗುತ್ತದೆ. ಆದರೆ ಪಾತ್ರೆಗಳಿಂದ ಸೋಫಾದವರೆಗೆ ಎಲ್ಲವನ್ನೂ ಸುಲಭವಾಗಿ ಸ್ವಚ್ಛಗೊಳಿಸಬಲ್ಲ ಸುಲಭ ವಿಧಾನ ಇಲ್ಲಿದೆ.
ನೀರು, ಉಪ್ಪು, ಬೇಕಿಂಗ್ ಸೋಡಾ, ನಿಂಬೆ, ಡಿಟರ್ಜೆಂಟ್, ಟೂತ್ ಪೇಸ್ಟ್, ಬ್ರೆಶ್
ಮೊದಲು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದಕ್ಕೆ 2 ಚಮಚ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಈ ಪೇಸ್ಟ್ ಸಾಕು ಮತ್ತೊಂದು ಬೌಲ್ ನಲ್ಲಿ 2 ಚಮಚ ಬೇಕಿಂಗ್ ಸೋಡಾ, ನಿಂಬೆ ರಸ, ಟೂತ್ ಪೇಸ್ಟ್, ಡಿಟರ್ಜೆಂಟ್ ಹಾಕಿ ಎಲ್ಲವನ್ನೂ ಮಿಕ್ಸ್ ಮಾಡಿಕೊಳ್ಳಿ.
ಈ ಮಿಶ್ರಣಕ್ಕೆ ತಯಾರಿಸಿಟ್ಟುಕೊಂಡಿರುವ ಉಪ್ಪು ನೀರನ್ನು ಸೇರಿಸಿ. ಇಲ್ಲಿಗೆ ಕ್ಲೀನಿಂಗ್ ಗೆ ಬೇಕಾಗುವ ಪೇಸ್ಟ್ ರೆಡಿಯಾಗುತ್ತದೆ.
ಸೋಫಾ ಕ್ಲೀನ್ ಮಾಡಲು ಮೊದಲು ಅದರ ಮೇಲೆ ಉಪ್ಪು ಹಾಕಿಕೊಳ್ಳಿ. ನಂತರ ಬೇಶ್ ಅನ್ನು ಈ ಪೇಸ್ಟ್ ನಲ್ಲಿ ಅಡ್ಡಿ ಸೋಫಾದ ಮೇಲೆ ಉಜ್ಜಿ ಶುಚಿಗೊಳಿಸಿ.
ಸರಿಯಾಗಿ ಶುಚಿಗೊಳಿಸಿದ ಬಳಿಕ ಸೋಫಾವನ್ನು ಒಣ ಬಟ್ಟೆಯಿಂದ ಒರೆಸಿಕೊಳ್ಳಿ.
ಈ ಪಾಸ್ಟ್ ಅನ್ನು ಬಳಸಿ ಗ್ಯಾಸ್ ಬರ್ನರ್ ಅನ್ನು ಕೂಡಾ ಸುಲಭವಾಗು ಕ್ಲೀನ್ ಮಾಡಬಹುದು.
ತಳ ಹಿಡಿದ ಪಾತ್ರೆ, ಜಿಡ್ಡು ಹಿಡಿದ ಪಾತ್ರೆಯನ್ನು ಕೂಡಾ ಈ ಪೇಸ್ಟ್ ಸಹಾಯದಿಂದ ಶುಚಿಗೊಳಿಸಬಹುದು.