ಉದ್ಯಾನನಗರಿ ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಪಿಂಕ್ ಮರದ್ದೇ ಹಾವಳಿ. ಈ ಹೂವಿನ ಹೆಸರು ಟಬುಬಿಯಾ. ಇದನ್ನು ಅಮೆರಿಕದ ಟ್ರೀ ಆಫ್ ಗೋಲ್ಡ್ ಎಂದು ಸಹ ಕರೆಯಲಾಗುತ್ತದೆ.

Yashaswini V
Apr 03,2023


ಟಬುಬಿಯಾದಲ್ಲಿ ಸುಮಾರು ತೊಂಬತ್ತಕ್ಕು ಹೆಚ್ಚು ತಳಿಗಳು ಇವೆ. ಟಬೂಬಿಯಾ ರೋಸಿಯ, ಚಳಿಗಾಲದಲ್ಲಿ ಬರುವ ಹೂವು ಆಗಿದ್ದು ಇದರ ವೈಜ್ಞಾನಿಕವಾಗಿ ಬಿಗ್ನೋನಿಯೇಸಿ ಜಾತಿಗೆ ಸಂಬಂಧಿಸಿದ ಮರ.


ಈ ಇಡೀ ಮರದಲ್ಲಿ ಒಂದೂ ಎಲೆಗಳಿಲ್ಲದೇ ಪಿಂಕ್‌ ಹೂವು ಮಾತ್ರ ಅರಳಿ ನಗುವನ್ನು ನೀಡುತ್ತೆ.


ಟಬುಬಿಯಾ ಇದ್ದ ಕಡೆ ಎಲ್ಲಾ ಪಿಂಕ್‌ ಕಲರ್ ಹವಾ ಜಾಸ್ತಿ ಇರುತ್ತದೆ.


ಇದರ ಜೊತೆಗೆ ಬ್ಲೂ ಗುಲ್ಮ ಹೋ ಹರ್, ಕಾಪರ್ ಪಾಟ್, ಬ್ರೌನಿ ರೋಸಿಯಾ, ಹೂಗಳು ಬೇಸಿಗೆ ಸಮಯದಲ್ಲಿ ಜಾಸ್ತಿ ಕಾಣಿಸಿಕೊಳ್ಳುತ್ತವೆ.


ಬೆಂಗಳೂರಿನಲ್ಲಿ ಜನವರಿಯಿಂದ ಶುರುವಾಗಿ ಮಾರ್ಚ್, ಏಪ್ರಿಲ್, ಮೇ, ತಿಂಗಳು ಬಂತಂದ್ರೇ ಸಾಕು ಈ ಟಬುಬಿಯಾದ ಹೂವಿನ ಸೊಬಗು ಜಾಸ್ತಿ.


ಗಾರ್ಡನ್ ಸಿಟಿ ಬೆಂಗಳೂರಿನ ಕಬ್ಬನ್ ಪಾರ್ಕ್ , ಲಾಲ್ಬಾಗ್ ಪಾರ್ಕ್, ಫ್ರೀಡಂ ಪಾರ್ಕ್ ರಸ್ತೆ, ಕೆ ಆರ್, ಪುರಂ, ಎಚ್‌ಎಸ್‌ಆರ್ ಲೇಔಟ್ ನ ರಸ್ತೆಗಳಲ್ಲಿ ಈ ಪಿಂಕ್ ಬ್ಯೂಟಿಯದ್ದೆ ರಾಜ್ಯಭಾರ...


ನಗರದ ಹಲವು ಏರಿಯಾ ಟಬಿಬಿಯಾ ಮರಗಳು ಜಾಸ್ತಿ ಆಗಿದ್ದು ಅದು ಎಲ್ಲರ ಕಣ್ಮನ ಸೆಳೆಯುತ್ತಿರುವುದಂತೂ ಸುಳ್ಳಲ್ಲ.

VIEW ALL

Read Next Story