ಸೊಳ್ಳೆ ನೋಡಲು ಚಿಕ್ಕದಾಗಿದ್ದಾದರೂ ಪ್ರಾಣ ಹಿಂಡಿ ಬಿಡುತ್ತದೆ. ಮಳೆಗಾಲದಲ್ಲಿ ಸೊಳ್ಳೆ ಕಾಟ ತುಸು ಹೆಚ್ಚೇ ಇರುತ್ತದೆ. ಸೊಳ್ಳೆ ಕಾಟದಿಂದ ತಪ್ಪಿಸಲು ಮನೆಯ ಸುತ್ತ ಈ ಗಿಡಗಳನ್ನು ನೆಡಬೇಕು.
ಈರುಳ್ಳಿ ಅಡುಗೆಯ ರುಚಿ ಹೇಗೆ ಹೆಚ್ಚಿಸುತ್ತದೆಯೋ ಅದರ ಗಿಡ ಸೊಳ್ಳೆ ಓಡಿಸಲು ಸಹಾಯ ಮಾಡುತ್ತದೆ.
ಮನೆಯ ಸುತ್ತ ತುಳಸಿ ಸಸಿ ನೆಡುವ ಮೂಲಕವೂ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಬಹುದು.
ನೀಲಗಿರಿ ಸಸಿ ಕೂಡಾ ಸೊಳ್ಳೆ ಓಡಿಸಲು ಸಹಾಯ ಮಾಡುತ್ತದೆ.
ಮನೆಯಲ್ಲಿ ನಿಂಬೆ ಗಿಡ ಹಾಕಿದರೆ ಬೇಸಿಗೆಯಲ್ಲಿ ಜ್ಯೂಸ್ ಮಾಡಬಹುದು. ಇದರ ಜೊತೆಗೆ ನಿಂಬೆ ಗಿಡ ಮನೆಯ ಸುತ್ತ ಇದ್ದಾರೆ ಸೊಳ್ಳೆ ಬರುವುದಿಲ್ಲ ಎಂದು ಕೂಡಾ ಹೇಳಲಾಗುತ್ತದೆ.
ಪುದೀನದ ವಾಸನೆ ಕೂಡಾ ಸೊಳ್ಳೆಯನ್ನು ಮನೆಯ ಸುತ್ತ ಸುಳಿಯದಂತೆ ತಡೆಯುತ್ತದೆ.
ಸೊಳ್ಳೆ ಮನೆ ಬಳಿ ಬಾರದಂತೆ ತಡೆಯಲು ಲ್ಯಾವೆಂಡರ್ ಸಸಿ ಸಹಾಯ ಮಾಡುತ್ತದೆ.
ಇನ್ನು ಮನೆಯ ಸುತ್ತ ಮದರಂಗಿ ಸಸಿ ನೆಟ್ಟರೂ ಸೊಳ್ಳೆ, ಜೇಡ ಮುಂತಾದವುಗಳ ಕಾಟ ಇರುವುದಿಲ್ಲ.
ನೀವು ಕೂಡಾ ಮನೆಯ ಬಳಿ ಸೊಳ್ಳೆ ಜೇಡ ಮುಂತಾದ ಕೀಟಗಳು ಬಾರದಂತೆ ತಡೆಯಬೇಕೆಂದು ಕೊಂಡರೆ ಈ ಗಿಡಗಳನ್ನು ನೆಡಬೇಕು.