ಮನೆಯಲ್ಲಿ ಕೆಲವು ಸಸಿಗಳನ್ನು ನೆಡುವ ಮೂಲಕ ಬೇಸಿಗೆಯ ಬಿರು ಬಿಸಿಲಿನಿಂದ ತಂಪು ಅನುಭವಿಸಬಹುದು.
ಆಲೋವಿರಾ ಸಸಿಯನ್ನು ಮನೆಯೊಳಗೇ ಇಡುವುದರಿಂದ ಅದು ಮನೆಯನ್ನು ತಂಪಾಗಿರಿಸುವುದು ಮಾತ್ರವಲ್ಲ ಮನೆಯೊಳಗಿನ ಆಮ್ಲಜನಕದ ಪ್ರಮಾಣವನ್ನು ಸರಿಯಾಗಿಡುತ್ತದೆ.
ಅರೆಕಾ ಪಾಮ್ ಇದು ಉದ್ದನೆಯ ಎಲೆಯನ್ನು ಹೊಂದಿದ್ದು, ನ್ಯಾಚ್ಯುರಲ್ ಕೂಲರ್ ಆಗಿ ಕೆಲಸ ಮಾಡುತ್ತದೆ.
ಸ್ನೇಕ್ ಪ್ಲಾಂಟ್ ಹೆಚ್ಚಿನ ಪ್ರಮಾಣದ ನೀರಿನ ಅಂಶವನ್ನು ಹೊಂದಿದ್ದು, ತನ್ನ ಸುತ್ತಲೂ ತಂಪಾಗಿರುವ ವಾತಾವರಣವನ್ನು ಹರಡುತ್ತದೆ.
ರಬ್ಬರ್ ಸಸ್ಯ ದೊಡ್ಡದಾದ ಎಲೆಗಳೊಂದಿಗೆ ಬರುತ್ತದೆ. ಇದು ಕೊನೆಯ ಒಳಗೆ ತೇವಾಂಶವನ್ನು ಕಾಪಾಡುತ್ತದೆ. ಇದರಿಂದಾಗಿ ಕೊನೆ ತಂಪಾಗಿರಲು ಸಹಾಯವಾಗುತ್ತದೆ.
ಚೈನೀಸ್ ಎವರ್ ಗ್ರೀನ್ ನ ಎಲೆಗಳು ಸುತ್ತಲಿನ ವಾತಾವರಣವನ್ನು ತಂಪಾಗಿ ಇಡುತ್ತದೆ.
ಸೂಚನೆ : ಇಲ್ಲಿ ನೀಡಲಾದ ಲೇಖನ ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು Zee Kannada News ಅನುಮೋದಿಸುವುದಿಲ್ಲ