ಮನೆಯ ಮುಂದೆ ಈ ಸಸ್ಯ ನೆಟ್ಟರೆ ಹಲ್ಲಿಗಳು ಓಡಿಹೋಗುತ್ತವೆ.. ಮತ್ತೆಂದೂ ಬರೋದಿಲ್ಲ

ಹಲ್ಲಿಗಳನ್ನು ದೂರವಿಡುವ ಸಸ್ಯ

ಹಲ್ಲಿಗಳು ಮನೆಗಳಲ್ಲಿ ಸಾಮಾನ್ಯವಾಗಿ ಕಂಡರೂ ಇದು ವಿಷಪೂರಿತ ಜೀವಿ. ಅಂತಹ ಹಲ್ಲಿಗಳನ್ನು ಓಡಿಸಲು ಕೆಲವೊಂದು ಗಿಡಗಳನ್ನು ಮನೆಯ ಮುಂದೆ ನೆಟ್ಟುನೋಡಿ.

ರೋಸ್ಮರಿ

ಗಿಡಮೂಲಿಕೆ ಸಸ್ಯ ರೋಸ್ಮರಿಯು ಗಾಢವಾದ ವಾಸನೆಯನ್ನು ಹೊಂದಿರುತ್ತದೆ. ಹೀಗಾಗಿ ಇದನ್ನು ಮನೆಯ ಸುತ್ತಮುತ್ತ ನೆಟ್ಟರೆ ಹಲ್ಲಿಗಳನ್ನು ಓಡಿಹೋಗುತ್ತವೆ.

ಲ್ಯಾವೆಂಡರ್

ಲ್ಯಾವೆಂಡರ್ ಹೂವು ನೋಡಲು ತುಂಬಾ ಸುಂದರವಾಗಿರುತ್ತದೆ. ಆದರೆ ಇದರ ಪರಿಮಳವು ಹಲ್ಲಿಗಳಿಗೆ ಇಷ್ಟವಾಗುವುದಿಲ್ಲ. ಆದ್ದರಿಂದ ಇದರ ಸುವಾಸನೆ ಬಂದೊಡನೆ ದೂರ ಸರಿಯುತ್ತವೆ.

ಲೆಮೆನ್ ಗ್ರಾಸ್

ಲೆಮೆನ್ ಗ್ರಾಸ್ ಕೂಡ ಹಲ್ಲಿಗಳನ್ನು ದೂರವಿಡುವ ಸಸ್ಯಗಳಲ್ಲಿ ಒಂದಾಗಿದೆ. ಇದು ಒಂದು ರೀತಿಯ ಹುಲ್ಲು. ಆದರೆ ಇದರ ರುಚಿ ನಿಂಬೆಯಂತೆ ಸ್ವಲ್ಪ ಹುಳಿಯಾಗಿರುತ್ತದೆ. ಇದರ ಗಾಢ ವಾಸನೆಯಿಂದ ಸರೀಸೃಪಗಳು, ಸೊಳ್ಳೆಗಳು ಮತ್ತು ಇತರ ಹಾನಿಕಾರಕ ಕೀಟಗಳು ಮನೆಯೊಳಗೆ ಪ್ರವೇಶಿಸುವುದಿಲ್ಲ.

ಪುದೀನ

ಪುದೀನ ಸಸ್ಯ ಗಾಢವಾದ ಪರಿಮಳವನ್ನು ಹೊಂದಿದೆ. ಇದನ್ನು ಆರೋಗ್ಯ ಗಣಿ ಎಂದೇ ಹೇಳಬಹುದು. ಆದರೆ ಹಲ್ಲಿಗಳಿಗೆ ಅದರ ವಾಸನೆಯನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಓಡಿಹೋಗುತ್ತವೆ.

VIEW ALL

Read Next Story