ಅನೇಕ ಜನರು ಮೂಲಂಗಿ ಸೊಪ್ಪನ್ನು ಎಸೆಯುತ್ತಾರೆ. ಆದರೆ ಅದರ ಎಲೆಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಮೂಲಂಗಿ ಮತ್ತು ಮೂಲಂಗಿ ಸೊಪ್ಪು ಅರ್ಧ ಕಿಲೋ ಈರುಳ್ಳಿ -1 ಬೆಳ್ಳುಳ್ಳಿ - 10 ರಿಂದ 12 ಎಸಳು ಕೊತ್ತಂಬರಿ ಪುಡಿ - ಒಂದು ಚಮಚ ಅರಶಿನ ಪುಡಿ - ಅರ್ಧ ಚಮಚ ಅಚ್ಚ ಖಾರದ ಪುಡಿ - ಅರ್ಧ ಚಮಚ ಸಾಸಿವೆ - ಅರ್ಧ ಚಮಚ ಸೋಂಪು - ಅರ್ಧ ಚಮಚ ಇಡಿ ಮೆಣಸಿನ ಕಾಯಿ - 2-3 ಎಣ್ಣೆ - 2-3 ಚಮಚ ಉಪ್ಪು ರುಚಿಗೆ ತಕ್ಕ
ಮೊದಲಿಗೆ ಮೂಲಂಗಿಯನ್ನು ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ಜೊತೆಗೆ ಸೊಪ್ಪನ್ನು ಕೂಡಾ ಕತ್ತರಿಸಿ.
ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಸಾಸಿವೆ, ಮೆಂತ್ಯೆ,ಕೆಂಪು ಮೆಣಸಿನ ಕಾಯಿ, ಇತ್ಯಾದಿಗಳನ್ನು ಹಾಕಿ.
ಸಾಸಿವೆ ಸಿಡಿದಾಗ ಈರುಳ್ಳಿ, ಬೆಳ್ಳುಳ್ಳಿ ಸೇರಿಸಿ. ಅದು ಕಂಡು ಬಣ್ಣಕ್ಕೆ ಬರುವವರೆಗೆ ಹುರಿಯಿರಿ.
ಈರುಳ್ಳಿ ಹುರಿದಾಗ ಅದಕ್ಕೆ ಮೇಲೆ ಹೇಳಿದ ಎಲ್ಲಾ ಮಸಾಲೆಗಳನ್ನು ಸೇರಿಸಿ.
ಈಗ ಈ ಮಸಾಲೆಗೆ ಮೂಲಂಗಿ ಮತ್ತು ಮೂಲಂಗಿ ಸೊಪ್ಪನ್ನು ಸೇರಿಸಿ. ಮಧ್ಯಮ ಉರಿಯಲ್ಲಿ 5 ರಿಂದ 6 ನಿಮಿಷಗಳವರೆಗೆ ಹುರಿಯಿರಿ.
ಮೂಲಂಗಿ ಮತ್ತು ಸೊಪ್ಪು ಸರಿಯಾಗಿ ಬೆಂದ ಮೇಲೆ ಗ್ಯಾಸ್ ಆಫ್ ಮಾಡಿ. ತಯಾರಾದ ಪಲ್ಯವನ್ನು ಚಪಾತಿ, ಅನ್ನದೊಂದಿಗೆ ಸವಿಯಿರಿ.
ಈ ರೀತಿ ಮೂಲಂಗಿ ಸೊಪ್ಪಿನ ಪಲ್ಯವನ್ನು ತಯಾರು ಮಾಡಬಹುದು.