ಸರ್ಕಸ್ ಪ್ರಿಯರ ಮನಗೆಲ್ಲಲು ಬೆಂಗಳೂರಿಗೆ ಮತ್ತೆ ಬರ್ತಿದೆ ರ್ಯಾಂಬೋ ಸರ್ಕಸ್

ಬೆಂಗಳೂರಿನಲ್ಲಿ ಸರ್ಕಸ್

ನೀವು ಈ ಬಾರಿಯ ಕ್ರಿಸ್ಮಸ್ ಹಾಗೂ ಹೊಸ ವರ್ಷದ ರಜೆಯನ್ನು ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಆನಂದಿಸಲು ಬಯಸಿದರೆ ಈ ರಜೆಯನ್ನು ವಿಶಿಷ್ಟವಾಗಿಸಲು ಮತ್ತೆ ಬೆಂಗಳೂರಿಗೆ ಬರ್ತಿದೆ ರ್ಯಾಂಬೋ ಸರ್ಕಸ್.

ರ್ಯಾಂಬೋ ಸರ್ಕಸ್

ಚೆನ್ನೈ, ವಿಶಾಖಪಟ್ಟಣ, ಗೋವಾ, ದೆಹಲಿ, ಕೊಚ್ಚಿ, ಮುಂಬೈ ಮತ್ತು ಇತರ ಹಲವು ನಗರಗಳಲ್ಲಿ ಜನರ ಮನಸೂರೆಗೊಂಡು, ಇದೀಗ ರ್ಯಾಂಬೋ ಸರ್ಕಸ್ ತಂಡ ನಮ್ಮ ಬೆಂಗಳೂರಿಗೆ ಆಗಮಿಸುತ್ತಿದೆ.

ಮಕ್ಕಳ ಮನರಂಜನೆ

ಸರ್ಕಸ್ ಪ್ರಿಯರಿಗೆ ಅದರಲ್ಲೂ ಮಕ್ಕಳಿಗೆ ಮನರಂಜನೆ ನೀಡುವ ಉದ್ದೇಶದಿಂದ ಈ ಬಾರಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ರಜೆಯ ಸಂದರ್ಭದಲ್ಲಿ ಈ ಸರ್ಕಸ್ ಅನ್ನು ಆಯೋಜಿಸಲಾಗುತ್ತಿದೆ.

90 ನಿಮಿಷಗಳ ಪ್ರದರ್ಶನ

90 ನಿಮಿಷಗಳ ಸರ್ಕಸ್ ಪ್ರಿಯರನ್ನು ರಂಜಿಸಿ ಅವರ ಉಸಿರು ಬಿಗಿ ಹಿಡಿದುಕೊಳ್ಳುವಂತೆ ಮಾಡುವ ರ್ಯಾಂಬೋ ಸರ್ಕಸ್ ಪ್ರದರ್ಶನ ಎಲ್ಲಾ ವಯೋಮಾನದ ನೋಡುಗರನ್ನು ಆಕರ್ಷಿಸುತ್ತದೆ.

ರ್ಯಾಂಬೊ ಸರ್ಕಸ್ ವೈಶಿಷ್ಟ್ಯ

ಜರ್ಮನ್ ವೀಲ್ ಡ್ಯುವೋ, ಕ್ರೇಡಲ್, ಹೇರ್ ಹ್ಯಾಂಗಿಂಗ್, ಸ್ಕೇಟಿಂಗ್, ಹ್ಯೂಮನ್ ಸ್ಲಿನಿ, ಸ್ವೋರ್ಡ್ ಆಕ್ಟ್, ಕ್ಯೂಬ್ ಜಗ್ಲಿಂಗ್, ರೊಲ್ಲಾ ಬೊಲ್ಲಾ ಮತ್ತು ಏರಿಯಲ್ ಸಿಲ್ಕ್ ಮತ್ತಿತರ ಪ್ರದರ್ಶನಗಳು ರ್ಯಾಂಬೊ ಸರ್ಕಸ್ ನಲ್ಲಿ ನಿಮ್ಮನ್ನು ಬೇರೆಯದ್ದೆ ಲೋಕಕ್ಕೆ ಕರೆದೊಯ್ಯಲಿದೆ.

ನಿತ್ಯ ಮೂರು ಪ್ರದರ್ಶನ

ಡಿಸೆಂಬರ್ 21 ರಿಂದ ಜನವರಿ 02, 2024 ರವರೆಗೆ ರ್ಯಾಂಬೋ ಸರ್ಕಸ್ ನಡೆಯಲಿದ್ದು, ಪ್ರತಿದಿನ ಕಲಾವಿದರು ಮೂರು ಪ್ರದರ್ಶನಗಳನ್ನು ನೀಡಲಿದ್ದಾರೆ.

ಪ್ರದರ್ಶನದ ಸಮಯ

ವಿಶ್ವವಿಖ್ಯಾತ ಸರ್ಕಸ್ ಕಲಾವಿದರ ಈ ಪ್ರದರ್ಶನಗಳು ಪ್ರತಿ ದಿನ ಅಪರಾಹ್ನ 1.30, ಸಂಜೆ 4.30 ಮತ್ತು 7.30 ಕ್ಕೆ ನಡೆಯಲಿವೆ.

ಸರ್ಕಸ್ ನಡೆಯುವ ಸ್ಥಳ

ಬೆಂಗಳೂರಿನ ಸೇಂಟ್ ಜಾನ್ಸ್ ಆಡಿಟೋರಿಯಂ, ಕೋರಮಂಗಲದಲ್ಲಿ ಸರ್ಕಸ್ ಪ್ರದರ್ಶನ ನಡೆಯಲಿದೆ.

ಕಲೆಗೆ ಪ್ರೋತ್ಸಾಹ

ನಮ್ಮ ಬೆಂಗಳೂರಿನಲ್ಲಿ ರ್ಯಾಂಬೊ ಸರ್ಕಸ್ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸುಜಿತ್ ದಿಲೀಪ್ ನಿಮ್ಮ ಆಗಮನ, ಈ ದೇಶದ ಹೆಮ್ಮೆಯ ಕಲೆಗೆ ನಿಮ್ಮ ಪ್ರೋತ್ಸಾಹ ಎಂದು ಹೇಳಿದ್ದಾರೆ.

VIEW ALL

Read Next Story