ವಿಶ್ವದಲ್ಲಿ ಲೆಕ್ಕವಿಲ್ಲದಷ್ಟು ಕೀಟಗಳಿವೆ, ಅದರಲ್ಲಿ ಸಾವಿರಾರು ಬಗೆಯ ಕೀಟಗಳನ್ನು ನೀವು ನೋಡಿರುತ್ತೀರಿ. ಆದರೆ ಲಕ್ಷಗಟ್ಟಲೇ ಬೆಲೆ ಬಾಳುವ ಈ ಕೀಟದ ಬಗ್ಗೆ ನಿಮಗೆ ಗೊತ್ತಾ..?
ʻಸ್ಟ್ಯಾಗ್ ಬೀಟಲ್ʼ ಎನ್ನುವ ಕೀಟ ವಿಶ್ವದ ಅತೀ ದುಬಾರಿಯಾದ ಕೀಟವಾಗಿದೆ. ಇದರೆ ಬೆಲೆ ಬರೋಬ್ಬರಿ 75 ಲಕ್ಷ ರೂ.
ʻಸ್ಟ್ಯಾಗ್ ಬೀಟಲ್ʼ ಅನ್ನು ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಅದ್ದರಿಂದ ಈ ಕೀಟಕ್ಕೆ ಭಾರಿ ಬೇಡಿಕೆ.
ʻಸ್ಟ್ಯಾಗ್ ಬೀಟಲ್ʼ ಅನ್ನು ಮನೆಗೆ ತಂದರೆ ಆ ವ್ಯಕ್ತಿ ಕೋಟ್ಯಾಧಿಪತಿ ಆಗುತ್ತಾನೆ ಎನ್ನುವ ನಂಬಿಕೆ ಇದೆ.
ನ್ಯಾಚುರಲ್ ಹಿಸ್ಟರಿ ಮ್ಯೂಸಿಯಮ್ ನ ಪ್ರಕಾರ ಈ ಕೀಟ 2 ರಿಂದ 6 ಗ್ರಾಂ ನಷ್ಟು ತೂಕವಿರುತ್ತದೆ.
ಈ ಕೀಟ ಮೂರರಿಂದ ಏಳು ವರ್ಷಗಳ ವರೆಗೂ ಬದುಕುತ್ತದೆ.
ʻಸ್ಟ್ಯಾಗ್ ಬೀಟಲ್ʼ ಕೀಟ ಔಷಧೀಯ ಗುಣಗಳಲ್ಲಿಯೂ ಸಮೃದ್ದವಾಗಿದ್ದು, ಚಿಕಿತ್ಸೆಯಲ್ಲಿಯೂ ಇದನ್ನು ಬಳಸಲಾಗುತ್ತದೆ.