ನಿರಂತರ ನೀರು ಹಾಕುತ್ತಿದ್ದರೂ ತುಳಸಿ ಗಿಡ ಒಣಗಲು ಇದೇ ಕಾರಣ

Ranjitha R K
Nov 28,2023

ತುಳಸಿ ಗಿಡದ ಮಹತ್ವ

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ. ಪ್ರತಿ ಮನೆಯಲ್ಲೂ ತುಳಸಿ ಗಿಡ ಇರಲೇಬೇಕು ಎನ್ನುತ್ತದೆ ಶಾಸ್ತ್ರ. ಆದರೆ ಕೆಲವೊಮ್ಮೆ ನೀರು ಹಾಕಿದ ನಂತರವೂ ತುಳಸಿ ಸಸ್ಯ ಒಣಗಲು ಪ್ರಾರಂಭಿಸುತ್ತದೆ.

ತುಳಸಿ ಗಿಡ ಒಣಗಲು ಕಾರಣ

ತುಳಸಿ ಗಿಡಕ್ಕೆ ಸೂರ್ಯನ ಬೆಳಕು ಮುಖ್ಯವಾಗಿ ಬೇಕು. ಹಾಗಿದ್ದರೆ ಮಾತ್ರ ತುಳಸಿ ಗಿಡ ಚೆನ್ನಾಗಿ ಬೆಳೆಯುತ್ತದೆ. ಆದರೂ ಅತಿಯಾದ ಶಾಖ, ಅಥವಾ ಶುಷ್ಕ ವಾತಾವರಣ ತುಳಸಿ ಗಿಡ ಒಣಗಲು ಕಾರಣವಾಗಬಹುದು.

ಅತಿಯಾದ ನೀರು

ಅತಿಯಾಗಿ ನೀರು ಹಾಕುವುದರಿಂದಲೂ ತುಳಸಿ ಒಣಗುತ್ತದೆ. ಮಣ್ಣಿಗೆ ನೀರು ಹೆಚ್ಚಾದರೆ ಬೇರು ಕೊಳೆಯಲು ಆರಂಭಿಸುತ್ತದೆ. ಆಗ ತುಳಸಿ ಗಿಡ ಒಣಗುತ್ತದೆ.

ಪೋಷಕಾಂಶಗಳ ಕೊರತೆ

ಮಣ್ಣಿನಲ್ಲಿ ಅಗತ್ಯವಾದ ಪೋಷಕಾಂಶಗಳ ಕೊರತೆಯಾದಾಗ ತುಳಸಿ ಗಿಡ ಒಣಗಲು ಆರಂಭಿಸುತ್ತದೆ.

ಕೀಟ ಅಥವಾ ಸಸ್ಯದ ಸೋಂಕು

ಕೀಟ ಅಥವಾ ಸಸ್ಯದ ಸೋಂಕು ಕೂಡಾ ತುಳಸಿ ಗಿಡ ಒಣಗುವುದಕ್ಕೆ ಕಾರಣವಾಗಬಹುದು.

ಅಗತ್ಯ ನೀರು

ತುಳಸಿ ಗಿಡಕ್ಕೆ ನಿತ್ಯ ನೀರು ಹಾಕಬೇಕು. ನೀರು ಕಡಿಮೆಯಾದರೂ ಈ ಗಿಡ ಒಣಗಿ ಹೋಗುತ್ತದೆ.

ಗೊಬ್ಬರ

ತುಳಸಿ ಗಿಡ ಒಣಗಲು ಗೊಬ್ಬರವೂ ಒಂದು ಕಾರಣ. ಗೊಬ್ಬರವನ್ನು ಸರಿಯಾಗಿ ಬಳಸದಿದ್ದರೆ ಗಿಡ ಒಣಗಲು ಆರಂಭಿಸುತ್ತದೆ.

ಸೂರ್ಯನ ಬೆಳಕು

ತುಳಸಿ ಗಿಡಕ್ಕೆ 6 ರಿಂದ 8 ಗಂಟೆಗಳ ಕಾಲ ಸೂರ್ಯನ ಬೆಳಕು ಅಗತ್ಯ. ಹಾಗಿದ್ದರೆ ಮಾತ್ರ ಅದು ಚೆನ್ನಾಗಿ ಬೆಳೆಯುತ್ತದೆ.


ನಿಮ್ಮ ಮನೆಯ ತುಳಸಿ ಕೂಡಾ ಒಣಗುತ್ತಿದ್ದರೆ ಅದಕ್ಕೆ ಕಾರಣ ಏನು ಎನ್ನುವುದನ್ನು ಮೊದಲು ತಿಳಿದುಕೊಳ್ಳಿ.

VIEW ALL

Read Next Story