ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಪಿರೀಯೇಡ್ಸ್ ಮುಂದಕ್ಕೆ ಬೀಳುತ್ತದೆ. ಗರ್ಭನಿರೋಧಕ ಮಾತ್ರೆಗಳನ್ನು ನಿಯಮಿತವಾಗಿ ತೆಗೆದುಕೊಳ್ಳುವುದರಿಂದ ದೇಹದ ನ್ಯಾಚ್ಯುರಲ್ ಹಾರ್ಮೊನಲ್ ಸೈಕಲ್ ಮೇಲೆ ಪ್ರಭಾವ ಬೀರುತ್ತದೆ.
ಅಧಿಕ ಒತ್ತಡ ಕೂಡಾ ಹಾರ್ಮೋನ್ ಬದಲಾವಣೆಗೆ ಕಾರಣವಾಗುತ್ತದೆ. ಇದು ಪಿರೀಯೇಡ್ಸ್ ಮೇಲೆ ಪರಿಣಾಮ ಬೀರುತ್ತದೆ.
ದೇಹ ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು ಕೂಡಾ ಪಿರೀಯೇಡ್ಸ್ ತಡವಾಗಿ ಆಗಲು ಪ್ರಮುಖ ಕಾರಣ.
ದೇಹದಲ್ಲಿ ಬ್ಲಡ್ ಶುಗರ್ ಹೆಚ್ಚಾದಾಗ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ಒಂದು ಪಿರೀಯೇಡ್ಸ್ ತಡವಾಗಿ ಆಗುವುದು.
ಥೈರಾಯಿಡ್ ಸಮಸ್ಯೆಯಿಂದಾಗಿ ಕೂಡಾ ಹಾರ್ಮೋನ್ ಏರಿಳಿತವಾಗುತ್ತದೆ. ಇದು ಪಿರೀಯೇಡ್ಸ್ ಮೇಲೆ ನೇರ ಪರಿಣಾಮ ಬೀರುತ್ತದೆ.
ಹಾರ್ಮೋನ್ ಇಂಬ್ಯಾಲೆನ್ಸ್ ಆದರೆ ಓವರೀಸ್ ನಲ್ಲಿ ಸಿಸ್ಟ್ ಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಪಿರೀಯೇಡ್ಸ್ ತಡವಾಗುತ್ತದೆ.
ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇದ್ದಾಗಲೂ ಪಿರೀಯೇಡ್ಸ್ ತಡವಾಗಿ ಆಗುತ್ತದೆ.