ಪೀರಿಯೇಡ್ ಪ್ಯಾಂಟಿಯನ್ನು ಸ್ಯಾನಿಟರಿ ಪಾಡ್ಸ್ ಬದಲು ಬಳಸಬಹುದು. ಇದನ್ನು ಧರಿಸುವುದು ಮತ್ತು ಶುಚಿಗೊಳಿಸುವುದು ಎರಡೂ ಬಲು ಸುಲಭ
ಪೀರಿಯೇಡ್ ಪ್ಯಾಂಟಿಯನ್ನು ಮತ್ತೆ ಮತ್ತೆ ಬಳಸಬಹುದು. ಸ್ಯಾನಿಟರಿ ಪ್ಯಾಡ್ ತರಹ ಒಮ್ಮೆ ಬಳಸಿ ಎಸೆಯುವಂತಿಲ್ಲ.
ಯಾರಿಗೆ ಪ್ಯಾಡ್, ಮೆನುಸ್ಟ್ರುವಲ್ ಕಪ್ ಬಳಸುವುದು ಇಷ್ಟವಿಲ್ಲವೋ ಅವರು ಪೀರಿಯೇಡ್ ಪ್ಯಾಂಟಿಯ ಆಯ್ಕೆಯನ್ನು ನೋಡಬಹುದು.
ಪೀರಿಯೇಡ್ ಪ್ಯಾಂಟಿ ಸ್ಯೈತರಿ ಪ್ಯಾಡ್ ರೀತಿಯೇ ಕೆಲಸ ಮಾಡುತ್ತದೆ.
ಪೀರಿಯೇಡ್ ಪ್ಯಾಂಟಿಯಲ್ಲಿ ಮೈಕ್ರೋಫೈಬರ್ ಪಾಲಿಸ್ಟರ್ ನ ಅನೇಕ ಪದರಗಳಿರುತ್ತವೆ. ನಾರ್ಮಲ್ ಪ್ಯಾಂಟಿ ರೀತಿ ಕಾಣಿಸಿದರೂ ತೇವವನ್ನು ಕ್ಷಣ ಮಾತ್ರದಲ್ಲಿ ಹೀರಿಕೊಳ್ಳುತ್ತದೆ.
ಸ್ಯಾನಿಟರಿ ಪ್ಯಾಡ್ ನಂಥಹ ಡಿಸ್ ಪೋಸೆಬಲ್ ವಸ್ತುಗಳಿಗೆ ಹೋಲಿಸಿದರೆ ಈ ಪೀರಿಯೇಡ್ ಪ್ಯಾಂಟಿಯನ್ನು ಪರಿಸರ ಸ್ನೇಹಿ ಎಂದರೂ ತಪ್ಪಲ್ಲ.
ಸಾಮಾನ್ಯ ಪ್ಯಾಂಟಿಗೆ ಹೋಲಿಸಿದರೆ ಇದು ತುಸು ದುಬಾರಿ ಅನ್ನಿಸಬಹುದು. ಆದರೆ ಒಮ್ಮೆ ಬಳಸಿದ ನಂತರ ಇದನ್ನು ಸ್ವಚ್ಚಗೊಳಿಸಿ ಮತ್ತೆ ಮರು ಬಳಕೆ ಮಾಡಬಹುದು.
ಆದರೆ ನೆನಪಿಸಿ ನಿಮ್ಮ ಫ್ಲೋ ಹೇಗಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಇದನ್ನೂ ಬಳಸಿ. ಸಾಮಾನ್ಯ ಅಥವಾ ಮಧ್ಯಮ ಪ್ರಮಾಣದಲ್ಲಿ ಫ್ಲೋ ಇದ್ದರೆ ಈ ಪೀರಿಯೇಡ್ ಪ್ಯಾಂಟಿ ಬೆಸ್ಟ್ ಆಯ್ಕೆ.