ಶ್ರೀಮಂತ ವ್ಯಕ್ತಿಗೆ ಸ್ವಯಂ ಶಿಸ್ತು ಮತ್ತು ಕಷ್ಟಪಟ್ಟು ಕೆಲಸ ಮಾಡುವ ಇಚ್ಛೆ ಹೆಚ್ಚಾಗಿರುತ್ತದೆ.
ಶ್ರೀಮಂತರು ಬೆಳಿಗ್ಗೆ ಬೇಗ ಏಳುತ್ತಾರೆ, ಯೋಜನೆ ಮಾಡಿ ತಮ್ಮ ಅಂದಿನ ಕೆಲಸಗಳನ್ನು ಅಂದೆ ಮುಗಿಸುತ್ತಾರೆ.
ಶ್ರೀಮಂತ ವ್ಯಕ್ತಿಗಳು ತಮ್ಮ ಗುರಿಗಳನ್ನು ರೂಪಿಸಿಕೊಳ್ಳುತ್ತಾರೆ, ಅವುಗಳನ್ನು ಸಾಧಿಸಲು ಶ್ರಮಿಸುತ್ತಾರೆ.
ಶ್ರೀಮಂತರು ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ, ವ್ಯಾಯಾಮ ಮಾಡುತ್ತಾರೆ, ಧ್ಯಾನ ಮಾಡುತ್ತಾರೆ, ಯೋಗ ಮಾಡುವುದನ್ನು ರೂಢಿಸಿಕೊಳ್ಳುತ್ತಾರೆ.
ಹಣವನ್ನು ಮಿತಿಯಾಗಿ ಬಳಸುತ್ತಾರೆ, ಹಾಗೂ ಹಣದಿಂದ ಹಣವನ್ನು ಸಂಪಾದಿಸಲು ಯೋಚನೆ ಮಾಡುತ್ತಾರೆ.
ಅಪಾಯಗಳನ್ನು ತೆಗೆದುಕೊಳ್ಳುವ ಅವರ ಇಚ್ಛೆ ಅವರನ್ನು ಮೇಲಕ್ಕೆ ಕೊಂಡೊಯ್ಯುತ್ತದೆ.
ಸವಾಲುಗಳನ್ನು ಸ್ವೀಕರಿಸುವ ಧೈರ್ಯ ಶ್ರೀಮಂತ ವ್ಯಕ್ತಿಗಳಲ್ಲಿ ಹೆಚ್ಚಾಗಿರುತ್ತದೆ.
ಜೀವನದಲ್ಲಿ ಏನೇ ಸಮಸ್ಯೆ ಬಂದರೂ ಸಹ ಶ್ರೀಮಂತ ವ್ಯಕ್ತಿಗಳು ಕುಗ್ಗದೆ ಮುನ್ನಡೆಯುತ್ತಾರೆ. ಆದ್ದರಿಂದ ಇವರು ಗೆಲುವು ಸಾಧಿಸುತ್ತಾರೆ.
ಸೋಲುವ ಭಯ ಇವರಲ್ಲಿ ಇರುವುದಿಲ್ಲ, ಆತ್ ವಿಶ್ವಾಸದಿಂದ ಇವರು ಎಲ್ಲಾ ಕೆಲಸಗಳನ್ನು ಮಾಡುತ್ತಾರೆ.