ಅರಿಶಿನವನ್ನು ಈ ರೀತಿ ಬಳಸಿ ತ್ವಚೆಯ ಸಮಸ್ಯೆಗಳಿಗೆ ಹೇಳಿ ಗುಡ್ ಬೈ!
ಅರಿಶಿನ ದೇಹದ ಆರೋಗ್ಯ ಮಾತ್ರವಲ್ಲ ತ್ವಚೆಯ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ.
ಸ್ವಚ್ಛ, ಹೊಳೆಯುವ ಮತ್ತು ಸುಂದರವಾದ ಚರ್ಮಕ್ಕಾಗಿ ಅರಿಶಿನ ಅತ್ಯುತ್ತಮ ಮನೆಮದ್ದು ಎಂದು ಹೇಳಲಾಗುತ್ತದೆ.
ಚರ್ಮದ ಆರೈಕೆಗಾಗಿ ಅರಿಶಿನವನ್ನು ಹೇಗೆ ಬಳಸಬೇಕು ಎಂದು ತಿಳಿಯೋಣ...
ಅರಿಶಿನದೊಂದಿಗೆ ಜೇನುತುಪ್ಪ ಮತ್ತು ಕೆಲ ಹನಿ ರೋಸ್ ವಾಟರ್ ಬೆರೆಸಿ ಇದನ್ನು ಮುಖಕ್ಕೆ ಹಚ್ಚಿ. ವಾರಕ್ಕೆರಡು ಬಾರಿ ಈ ರೀತಿ ಮಾಡುವುದರಿಂದ ಸುಕ್ಕುಗಳ ಸಮಸ್ಯೆಯನ್ನು ನಿವಾರಿಸಬಹುದು.
1 ಟೀಸ್ಪೂನ್ ಮೊಸರಿಗೆ ಅರ್ಧ ಟೀಸ್ಪೂನ್ ಅರಿಶಿನ ಪುಡಿಯನ್ನು ಮಿಶ್ರಣ ಮಾಡಿ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ. 15 ನಿಮಿಷಗಳ ಬಳಿಕ ಸ್ವಲ್ಪ ಕೈ ಒದ್ದೆ ಮಾಡಿಕೊಂಡು ಲಘುವಾಗಿ ಸ್ಕ್ರಬ್ ಮಾಡುತ್ತಾ ಫೇಸ್ ವಾಶ್ ಮಾಡಿ. ಇದು ಚರ್ಮದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಅರಿಶಿನದೊಂದಿಗೆ ಶ್ರೀಗಂಧ ಮತ್ತು ಕೆಲವು ಹನಿ ಹಾಲನ್ನು ಬೆರೆಸಿ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. 10 ನಿಮಿಷಗಳ ನಂತರ ಫೇಸ್ ವಾಸ್ ಮಾಡಿ.
ಅರಿಶಿನವನ್ನು ಕಡಲೆಹಿಟ್ಟು, ಕೆಲವು ಹನಿ ಜೇನು ತುಪ್ಪ ಮತ್ತು ಹಾಲನ್ನು ಬೆರೆಸಿ ಮುಖಕ್ಕೆ ಹಚ್ಚಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆಯಿರಿ. ಇದರಿಂದ ಸನ್ ಟ್ಯಾನಿಂಗ್ ಮಾಯವಾಗುತ್ತದೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.