ಸನಾತನ ಧರ್ಮದ ಪ್ರಕಾರ ತುಳಸಿಯನ್ನು ರಾತ್ರಿ ವೇಳೆ ಮತ್ತು ಕೆಲವು ವಿಶೇಷ ಸಂದರ್ಭಗಳಲ್ಲಿ ಸ್ಪರ್ಶಿಸಬಾರದು.
ಯಾವ ಮನೆಯಲ್ಲಿ ನಿತ್ಯವೂ ತುಳಸಿಯನ್ನು ಪೂಜಿಸಲಾಗುತ್ತದೆಯೋ ಅಲ್ಲಿ ಸಮಸ್ಯೆಗಳಿರುವುದಿಲ್ಲ. ತುಳಸಿಯನ್ನು ವಿಷ್ಣು ಪ್ರಿಯೆ ಎನ್ನುತ್ತಾರೆ.
ಸರಿಯಾದ ದಿಕ್ಕಿನಲ್ಲಿ ತುಳಸಿಯನ್ನು ನೆಡುವುದರಿಂದ ಮತ್ತು ವಿಧಿ ವಿಧಾನಗಳಿಂದ ತುಳಸಿಯ ಪೂಜೆ ಮಾಡುವುದರಿಂದ ಮನೆ ಮಂದಿ ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ.
ತುಳಸಿಗೆ ಸಂಬಂಧಿಸಿದಂತೆ ಕೆಲವೊಂದು ವಾಸ್ತು ನಿಯಮಗಳನ್ನು ಹೇಳಲಾಗಿದೆ. ಇವುಗಳಲ್ಲಿ ಒಂದು ರಾತ್ರಿ ಹೊತ್ತು ತುಳಸಿಯನ್ನು ಸ್ಪರ್ಶಿಸಬಾರದು ಎನ್ನುವುದು.
ಸೂರ್ಯಾಸ್ತದ ನಂತರ ಯಾವುದೇ ಕಾರಣಕ್ಕೂ ತುಳಸಿಯನ್ನು ಸ್ಪರ್ಶಿಸಬಾರದು.
ತುಳಸಿಯಲ್ಲಿ ಲಕ್ಷ್ಮೀ ದೇವಿಯ ವಾಸವಿರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ರಾತ್ರಿ ಹೊತ್ತು ಇದನ್ನು ಸ್ಪರ್ಶಿಸಿದರೆ ಧನ ಹಾನಿಯಾಗುವುದು.
ಭಾನುವಾರ ಮತ್ತು ಏಕಾದಶಿಯಂದು ಕೂಡಾ ತುಳಸಿಯನ್ನು ಮುಟ್ಟಬಾರದು. ಈ ದಿನಗಳಲ್ಲಿ ತುಳಸಿಗೆ ನೀರು ಕೂಡಾ ಅರ್ಪಿಸಬಾರದು.
ತುಳಸಿ ಮುಂದೆ ಎದುರಾಗುವ ಸಮಸ್ಯೆಗಳ ಸೂಚನೆಯನ್ನು ಮೊದಲೇ ನೀಡುತ್ತದೆ. ತುಳಸಿ ಒಮ್ಮೆಲೇ ಒಣಗಲು ಆರಂಭವಾದರೆ ದೊಡ್ಡ ಸಮಸ್ಯೆ ಕಾದಿದೆ ಎಂದರ್ಥ.
ತುಳಸಿ ನೆಟ್ಟ ಕೆಲವೇ ದಿನಗಳಲ್ಲಿ ಬಾಡಿ ಹೋಗುತ್ತಿದ್ದರೆ ಪಿತೃ ದೋಷ ಇದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.