1. ಮುತ್ತು ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಅತ್ಯುತ್ತಮ ವಿಧಾನ ಎನ್ನಲಾಗುತ್ತದೆ. ಆದರೆ, ಇದರಿಂದಾಗುವ ಹಾನಿಗಳು ನಿಮಗೆ ತಿಳಿದಿವೆಯೇ?
2. ಇದರಿಂದ ಕೆಲ ಹಾನಿಗಳು ಇದ್ದರೂ ಕೊಡ ಲಾಭಗಳ ಹೋಲಿಕೆಯಲ್ಲಿ ಕಡಿಮೆ
3. ನಿಮಗೆ ಗೊತ್ತಿಲ್ಲ ಎಂದಾದರೆ, ಬನ್ನಿ ತಿಳಿದುಕೊಳ್ಳೋಣ,
4. ಕಿಸ್ ಮಾಡುವುದರಿಂದ ಹಲವು ಗಂಭೀರ ಕಾಯಿಲೆಗಳು ಬರಬಹುದು.
5. ಇಂಫ್ಲೂಯೆಂಸಾ ಸೋಂಕಿಗೆ ಒಳಗಾಗಿರುವ ವ್ಯಕ್ತಿಗೆ ಕಿಸ್ ಮಾಡಿದರೆ, ಸ್ನಾಯುನೋವು, ತಲೆನೋವು, ಜ್ವರ ಹಾಗೂ ಗಂಟಲು ಕೆರೆತದಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.
6. ಏಕೆಂದರೆ ಸೋಂಕು ಬಲ್ಗಮ್ ಅಥವಾ ಲಾಲಾರಸದಿಂದ ಹರಡುತ್ತದೆ. ಹೀಗಾಗಿ ಇಂಫ್ಲೂಯೆಂಸಾ ಕಾಯಿಲೆ ಇರುವವರಿಗೆ ಕಿಸ್ ಮಾಡಬೇಡಿ.
7. ಇದಲ್ಲದೆ ಕಿಸ್ ಮಾಡುವುದರಿಂದ ಹಾರ್ಪಿಸ್ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಇದೊಂದು ರೀತಿಯ ವೈರಲ್ ಸೊಂಕಾಗಿದೆ.
8. ಈ ಸೋಂಕು ತಲುಲಿದರೆ ಮುಖದ ಅಕ್ಕಪಕ್ಕ ಗಾಢವಾದ ಕಲೆಗಳು ಬೀಳುತ್ತವೆ.
9. ಮುತ್ತು ಕೊಡುವುದರಿಂದ ಹರಡುವ ಕಾಯಿಲೆಗಳಲ್ಲಿ ಸಿಕಲಿಸ್ ಕೂಡ ಒಂದು. ಇದರಿಂದ ಬಾಯಿಯಲ್ಲಿ ಸಣ್ಣಪುಟ್ಟ ಅಲ್ಸರ್ ಗಳಾಗುತ್ತವೆ.