ನಿಮ್ಮ ಗಟ್ಟಿ ನಿರ್ಧಾರದ ಬಗ್ಗೆ ಎಂದಿಗೂ ಸಹಮತ ಸೂಚಿಸದೆ ದೂಷಿಸುವುದು
ಗಂಡನ ಜೊತೆ ಕುಳಿತುಕೊಂಡು ಮಾತನಾಡುವಾಗ ಮಧ್ಯೆ ಬಂದು ಏನಾದರೂ ಕೆಲಸ ಹೇಳುವುದು
ನಿಮ್ಮ ಬಗ್ಗೆ ಇಲ್ಲಸಲ್ಲದ ಗಾಸಿಪ್’ಗಳನ್ನು ಹಬ್ಬುವಂತೆ ಮಾಡುವುದು
ನಿಮ್ಮ ಪತಿಯ ಜೊತೆಗಿನ ಸಂಬಂಧಕ್ಕೆ ಹುಳಿ ಹಿಂಡುವ ಕೆಲಸಗಳನ್ನು ಮಾಡುವುದು
ನಿಮ್ಮ ಮುಂದೆ ಬೇರೆಯವರ ಮೇಲೆ ಅತಿಯಾದ ಪ್ರೇಮ ಇರುವಂತೆ ತೋರ್ಪಡಿಸುವುದು
ನಿಮ್ಮ ವ್ಯಕ್ತಿತ್ವ, ಸ್ಟೈಲ್ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವುದು
ನಿಮ್ಮ ಪತಿಯ ಬಗ್ಗೆ ನೀವು ಕಾಳಜಿ ತೋರಿಸಿದರೂ ಕೆಲ ಅತ್ತೆಯಂದಿರು ಅದನ್ನು ಸಹಿಸಿಕೊಳ್ಳುವುದಿಲ್ಲ
ಕುಟುಂಬದಲ್ಲಿ ನಿಮ್ಮ ಇರುವಿಕೆಯನ್ನು ಆಕೆ ಒಪ್ಪಿಕೊಳ್ಳದಿರುವುದು