ಹಳದಿ ಹಲ್ಲುಗಳನ್ನು ಫಳ ಫಳ ಹೊಳೆಯುವಂತೆ ಮಾಡಲು ಸಿಂಪಲ್ ಮನೆಮದ್ದು

ಹಳದಿ ಹಲ್ಲುಗಳು

ಹಲ್ಲುಗಳು ಮುಖದ ಅಂದವನ್ನು ಹೆಚ್ಚಿಸುತ್ತವೆ. ಅದೇ ರೀತಿ ಹಳದಿ ಹಲ್ಲುಗಳು ಆತ್ಮವಿಶ್ವಾಸವನ್ನು ಕುಗ್ಗಿಸುತ್ತವೆ.

ಮನೆಮದ್ದು

ಆದರೆ, ಸರಳ ಮನೆಮದ್ದುಗಳ ಸಹಾಯದಿಂದ ನೀವು ನಿಮ್ಮ ಹಳದಿ ಹಲ್ಲುಗಳನ್ನು ಫಳ ಫಳ ಹೊಳೆಯುವಂತೆ ಮಾಡಬಹುದು. ಅಂತಹ ಸರಳ ಮನೆಮದ್ದುಗಳೆಂದರೆ...

ನಿಂಬೆ ರಸ

ನಿಂಬೆ ರಸದಲ್ಲಿ ಉಪ್ಪು ಮತ್ತು ಸ್ವಲ್ಪ ಸಾಸಿವೆ ಎಣ್ಣೆಯನ್ನು ಬೆರೆಸಿ ಬ್ರಷ್ ಮಾಡಿ. ಇದರಿಂದ ಹಲ್ಲುಗಳು ಬೆಳ್ಳಗೆ ಹೊಳೆಯುತ್ತವೆ.

ನಿಂಬೆ ಹಣ್ಣಿನ ಸಿಪ್ಪೆ

ನಿಂಬೆ ಹಣ್ಣಿನ ಸಿಪ್ಪೆಯ ಒಳಭಾಗವನ್ನು ನಿಮ್ಮ ಹಲ್ಲುಗಳ ಮೇಲೆ ಉಜ್ಜಿ ನಂತರ ಉಗುರು ಬೆಚ್ಚಗಿನ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಹಲ್ಲುಗಳ ಹಳದಿ ಬಣ್ಣ ಕ್ರಮೇಣ ಕಡಿಮೆಯಾಗುತ್ತದೆ.

ಬೇಕಿಂಗ್ ಸೋಡಾ

ಹಲ್ಲುಗಳನ್ನು ಬಿಳುಪುಗೊಳಿಸಲು ಬೇಕಿಂಗ್ ಸೋಡಾ ಕೂಡ ಸುಲಭ ಮಾರ್ಗವಾಗಿದೆ.

ಕಿತ್ತಳೆ ಸಿಪ್ಪೆ

ಕಿತ್ತಳೆ ಸಿಪ್ಪೆಯ ಸಹಾಯದಿಂದ ಪ್ರತಿದಿನ ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುವುದರಿಂದ ಕೆಲವೇ ದಿನಗಳಲ್ಲಿ ಹಳದಿ ಹಲ್ಲುಗಳು ಮಾಯವಾಗುತ್ತವೆ.

ಉಪ್ಪು

ನಿತ್ಯ ಉಪ್ಪಿನಿಂದ ಹಲ್ಲುಜ್ಜುವುದರಿಂದ ಕೆಲವೇ ದಿನಗಳಲ್ಲಿ ಹಲ್ಲುಗಳು ಫಳ ಫಳ ಹೊಳೆಯುತ್ತವೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story