ಕೂದಲಿನ ಬೆವರಿನ ವಾಸನೆಯಿಂದ ಮುಕ್ತಿಗಾಗಿ ಸಿಂಪಲ್ ಮನೆಮದ್ದುಗಳು

ಕೂದಲಿನಲ್ಲಿ ಬೆವರಿನ ವಾಸನೆ

ಬೇಸಿಗೆಯಲ್ಲಿ ತಲೆಯ ಭಾಗದಲ್ಲಿ ಹೆಚ್ಚು ಬೆವರುವುದರಿಂದ ಕೂದಲು ಎಣ್ಣೆಯುಕ್ತವಾಗುತ್ತದೆ. ನಂತರ ನೆತ್ತಿಯಿಂದ ವಾಸನೆ ಬರಲು ಪ್ರಾರಂಭಿಸುತ್ತದೆ.

ಮನೆಮದ್ದು

ಕೂದಲಿನ ಬೆವರಿನ ವಾಸನೆಯನ್ನು ಹೋಗಲಾಡಿಸಾಲು ಹಲವು ವಿಧಾನಗಳಿವೆ. ಅದರಲ್ಲೂ, ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೆಲವು ಪದಾರ್ಥಗಳನ್ನು ಬಳಸಿ ಸುಲಭವಾಗಿ ಈ ಸಮಸ್ಯೆಯಿಂದ ಪರಿಹಾರವನ್ನು ಪಡೆಯಬಹುದು. ಅವುಗಳೆಂದರೆ...

ರೋಸ್ ವಾಟರ್

ವಾರಕ್ಕೆ ಎರಡು ಬಾರಿ ನೀವು ಸ್ನಾನ ಮಾಡುವ ನೀರಿನಲ್ಲಿ ರೋಸ್ ವಾಟರ್ ಬೆರೆಸಿ ಕೂದಲನ್ನು ತೊಳೆಯುವುದರಿಂದ ಕೂದಲಿನಿಂದ ಬರುವ ಬೆವರಿನ ವಾಸನೆಯನ್ನು ಹೋಗಲಾಡಿಸಬಹುದು.

ಪುದೀನಾ ಎಣ್ಣೆ

ನೀವು ಬಳಸುವ ಶಾಂಪೂ ಅಥವಾ ಕಂಡೀಷನರ್‌ನಲ್ಲಿ ಪುದೀನಾ ಎಣ್ಣೆಯನ್ನು ಬೆರೆಸಿ ನಿಮ್ಮ ಕೂದಲನ್ನು ತೊಳೆಯಿರಿ. ಇದರಿಂದಲೂ ನಿಮ್ಮ ಕೂದಲಿನ ಬೆವರಿನ ಸಮಸ್ಯೆಗೆ ಸುಲಭ ಪರಿಹಾರ ದೊರೆಯುತ್ತದೆ.

ಎಣ್ಣೆ ಮಸಾಜ್

ಕೂದಲನ್ನು ಬೆವರಿನ ವಾಸನೆಯಿಂದ ದೂರವಿರಿಸಲು ವಾರಕ್ಕೊಮ್ಮೆ ಕೂದಲಿಗೆ ಎಣ್ಣೆಯಿಂದ ಮಸಾಜ್ ಮಾಡಿ.

ಆಪಲ್ ಸೈಡರ್ ವಿನೆಗರ್

ಸ್ವಲ್ಪ ನೀರಿನಲ್ಲಿ ಒಂದೆರಡು ಸ್ಪೂನ್ ಆಪಲ್ ಸೈಡರ್ ವಿನೆಗರ್ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಕೂದಲಿಗೆ ಹಚ್ಚಿ ಸ್ವಲ್ಪ ಸಮಯದ ಬಳಿಕ ತಣ್ಣೀರಿನಿಂದ ತಲೆಗೆ ಸ್ನಾನ ಮಾಡಿ. ಇದರಿಂದ ಕೂದಲಿನಿಂದ ಬರುವ ಬೆವರಿನ ವಾಸನೆಯನ್ನು ನಿವಾರಿಸಬಹುದು.

ಹೇರ್ ವಾಶ್

ಬೇಸಿಗೆಯಲ್ಲಿ ಎರಡು ದಿನಗಳಿಗೊಮ್ಮೆ ಹೇರ್ ವಾಶ್ ಮಾಡುವುದರಿಂದಲೂ ಈ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story