ಕಾಂತಿಯುತ ಚರ್ಮಕ್ಕೆ ಸಿಂಪಲ್ ಮನೆಮದ್ದು

ಋತುಮಾನ

ವಾತಾವರಣ ಬದಲಾದಂತೆ ಶೀತ, ಧೂಳು, ಮಾಲಿನ್ಯದಿಂದಾಗಿ ಇದು ತ್ವಚೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಮೊಡವೆಗಳು, ಕಲೆಗಳು ಉಂಟಾಗುತ್ತವೆ.

ಮನೆಮದ್ದು

ಇದರಿಂದ ಪರಿಹಾರ ಪಡೆಯಲು ಮಾರುಕಟ್ಟೆಯಲ್ಲಿ ಹಲವು ಕ್ರೀಮ್ ಗಳು ಲಭ್ಯವಿವೆ. ಆದರೂ, ಕೆಲವು ಮನೆಮದ್ದುಗಳ ಸಹಾಯದಿಂದ ಇದರಿಂದ ಸುಲಭ ಪರಿಹಾರ ಪಡೆಯಬಹುದು.

ಹರಳೆಣ್ಣೆ

ರಾತ್ರಿ ಮಲಗುವ ಮುನ್ನ ಮುಖಕ್ಕೆ ಹರಳೆಣ್ಣೆ ಹಚ್ಚಿ ಮುಂಜಾನೆ ಎದ್ದು ಫೇಸ್ ವಾಶ್ ಮಾಡಿ. ಇದರಿಂದ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ.

ಪುದೀನಾ ರಸ

ಪುದೀನಾ ರಸದಿಂದ ಮುಖಕ್ಕೆ ಮಸಾಜ್ ಮಾಡಿ ರಾತ್ರಿಯೆಲ್ಲಾ ಹಾಗೆ ಬಿಡಿ. ಬೆಳಿಗ್ಗೆ ತಣ್ಣೀರಿನಿಂದ ಮುಖ ತೊಳೆಯಿರಿ. ಇದರಿಂದ ಮುಖದ ಮೊಡವೆಯನ್ನು ನೈಸರ್ಗಿಕವಾಗಿ ನಿವಾರಿಸಬಹುದು.

ದೇಸಿ ತುಪ್ಪ

ರಾತ್ರಿ ಮಲಗುವ ಮೊದಲು ದೇಸಿ ತುಪ್ಪವನ್ನು ಮುಖಕ್ಕೆ ಹಚ್ಚಿ. ಈ ರೀತಿ ಮಾಡುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.

ಎಣ್ಣೆ ಮಸಾಜ್

ಬಾದಾಮಿ ಎಣ್ಣೆ ಮತ್ತು ತೆಂಗಿನ ಎಣ್ಣೆಯಿಂದ ನಿಮ್ಮ ಮುಖವನ್ನು ಮಸಾಜ್ ಮಾಡಿ. ವಾರಕ್ಕೆರಡು ಬಾರಿ ಈ ರೀತಿ ಮಾಡುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.

ಖರ್ಜೂರ

ನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಮೂರ್ನಾಲ್ಕು ಖರ್ಜೂರ ಸೇವಿಸುವುದರಿಂದ ಕಾಂತಿಯುತ ತ್ವಚೆಯನ್ನು ಪಡೆಯಬಹುದು.

ಸೌತೆಕಾಯಿ

ಸೌತೆಕಾಯಿ ಸೇವನೆಯು ತ್ವಚೆಯ ಆರೋಗ್ಯಕ್ಕೂ ಪ್ರಯೋಜನಕಾರಿ ಆಗಿದ್ದು, ಮುಖ ಹೊಳೆಯುವಂತೆ ಮಾಡುತ್ತದೆ.

ಸೂಚನೆ

ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story