ಅಕ್ಕಿಯಲ್ಲಿ ಹುಳಗಳು ಬಾರದಂತೆ ಇಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

Yashaswini V
Dec 17,2024

ಅಕ್ಕಿಯಲ್ಲಿ ಕೀಟ ಬಾಧೆ

ಎಷ್ಟೇ ಹುಷಾರಾಗಿದ್ದರು, ಏನೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡರೂ ಸಹ ಅಕ್ಕಿಯಲ್ಲಿ ಬೇಗ ಬಿಳಿ ಅಥವಾ ಕಪ್ಪು ಹುಳುಗಳು ಕಾಣಿಸಿಕೊಳ್ಳುತ್ತವೆ.

ಅಕ್ಕಿ ಚೀಲ

ಅದರಲ್ಲೂ, ಹೆಚ್ಚು ಅಕ್ಕಿಯನ್ನು ಒಟ್ಟಿಗೆ ಶೇಖರಿಸುವವರ ಮನೆಯಲ್ಲಿ ಅಕ್ಕಿ ಸೋಸುವುದೇ ಒಂದು ದೊಡ್ಡ ಕೆಲಸ ಎಂಬಂತಾಗಿರುತ್ತದೆ.

ಸುಲಭ ಟ್ರಿಕ್

ಆದಾಗ್ಯೂ, ಕೆಲವು ಸುಲಭ ಟ್ರಿಕ್ಸ್ ಅನುಸರಿಸುವ ಮೂಲಕ ಮನೆಯಲ್ಲಿ ಅಕ್ಕಿ ಚೀಲದಲ್ಲಿ ಹುಳಗಳು ಬಾರದಂತೆ ತಡೆಯಬಹುದು. ಅದು ಹೇಗೆ ಎಂದು ತಿಳಿಯಲು ಮುಂದೆ ಓದಿ...

ಲವಂಗ

8-9 ಲವಂಗವನ್ನು ಒಂದು ಕಾಗದದಲ್ಲಿ ಕಟ್ಟಿ ಅಕ್ಕಿ ಮೂಟೆಯಲ್ಲಿ ಇಡುವುದರಿಂದ ಇದರ ವಾಸನೆಗೆ ಒಂದೇ ಒಂದು ಕೀಟವೂ ಸಹ ಅಕ್ಕಿಯಲ್ಲಿ ಸೇರುವುದಿಲ್ಲ.

ಬೇವು

ಒಣಗಿರುವ ಶುದ್ಧ ಬಟ್ಟೆಯಲ್ಲಿ ಬೇವಿನ ಎಲೆಗಳನ್ನು ಕಟ್ಟಿ ಅದನ್ನು ಕಟ್ಟಿ ಮೂಟೆಯಲ್ಲಿ ಇಟ್ಟರೆ ಅಕ್ಕಿಯಲ್ಲಿ ಕೀಟಗಳು ಬರದಂತೆ ತಡೆಯಬಹುದು.

ಬೆಂಕಿಕಡ್ಡಿ

ಒಲೆ ಹಚ್ಚಲು ಬಳಸುವ ಬೆಂಕಿಕಡ್ಡಿ ಯಲ್ಲಿ ಸಲ್ಫರ್ ಅಂಶವಿದೆ. ಇದನ್ನು ಅಕ್ಕಿಯಲ್ಲಿ ಇಡುವುದರಿಂದ ಹುಳುಗಳು ಬರುವುದಿಲ್ಲ. ಆದರೆ, ಅಕ್ಕಿಯಲ್ಲಿ ಬೆಂಕಿಕಡ್ಡಿ ಇಟ್ಟರೆ ಅಕ್ಕಿಯನ್ನು ಚೆನ್ನಾಗಿ ತೊಳೆದ ಬಳಿಕವಷ್ಟೇ ಆಹಾರ ತಯಾರಿಸಿ.

ಬೆಳ್ಳುಳ್ಳಿ ಸಿಪ್ಪೆ

ಬೆಳ್ಳುಳ್ಳಿ ಸಿಪ್ಪೆಯನ್ನು ಅಕ್ಕಿಯಲ್ಲಿ ಮಿಶ್ರಣ ಮಾಡಿ ಇಟ್ಟರೆ ನೀವು ತಿಂಗಳುಗಟ್ಟಲೆ ಇಟ್ಟರೂ ಸಹ ಅಕ್ಕಿಯಲ್ಲಿ ಹುಳ ಬರುವುದಿಲ್ಲ.

ಬಿರಿಯಾನಿ ಎಲೆ

ಬಿರಿಯಾನಿ ರುಚಿ ಹೆಚ್ಚಿಸುವ ಬಿರಿಯಾನಿ ಎಲೆಯನ್ನು ಅಕ್ಕಿ ಡಬ್ಬದಲ್ಲಿ ಹಾಕಿಟ್ಟರೆ ಅಕ್ಕಿಯಲ್ಲಿ ಯಾವುದೇ ಕ್ರಿಮಿಕೀಟಗಳು ಬರದಂತೆ ತಡೆಯಬಹುದು.

ಕರಿ ಮೆಣಸು

ಕರಿ ಮೆಣಸಿನ ವಾಸನೆಯು ಕೀಟಗಳು ಬರುವುದನ್ನು ತಡೆಯುತ್ತದೆ. ಹಾಗಾಗಿ ನೀವು ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ತಂದಿದ್ದರೆ ಅದರಲ್ಲಿ ಸ್ವಲ್ಪ ಕರಿಮೆಣಸಿನ ಕಾಳುಗಳನ್ನು ಹಾಕಿ ಇಡಿ.

VIEW ALL

Read Next Story