ಮನೆಯಲ್ಲಿ ಇರಿಸಲಾಗಿರುವ ಕೆಲವು ವಸ್ತುಗಳ ಸಹಾಯದಿಂದ ಟೈಲ್ಸ್ ಅನ್ನು ಸ್ವಚ್ಛಗೊಳಿಸಬಹುದು.
ವಿನಿಗರ್ ಮತ್ತು ನೀರನ್ನು ಸಮ ಪ್ರಮಾಣದಲ್ಲಿ ಬೆರೆಸಿ ಟೈಲ್ಸ್ ಮೇಲೇ ಹಾಕಿ 20 ನಿಮಿಷಗಳ ವರೆಗೆ ಹಾಗೆಯೇ ಬಿಡಿ. ನಂತರ ಬ್ರೆಶ್ ನಿಂದ ಉಜ್ಜುವ ಮೂಲಕ ಟೈಲ್ಸ್ ಸ್ವಚ್ಚಗೊಳಿಸಿ.
ನಿಂಬೆ ರಸವನ್ನು ಟೈಲ್ಸ್ ಮೇಲೆ ಹಾಕಿ ಬ್ರೆಶ್ ನಿಂದ ಉಜ್ಜಿ ಸ್ವಚ್ಚಗೊಳಿಸಿ.
ವಿನಿಗರ್ ಮತ್ತು ಅಡುಗೆ ಸೋಡಾ ಮಿಶ್ರಣವನ್ನು ಟೈಲ್ಸ್ ಮೇಲೆ ಹಾಕಿ ಸ್ವಚ್ಛಗೊಳಿಸುವುದರಿಂದ ಟೈಲ್ಸ್ ಶುಚಿಯಾಗುತ್ತದೆ.
ಟೈಲ್ಸ್ ಮೇಲೆ ಹೈಡ್ರೋಜನ ಪೆರಾಕ್ಸೈಡ್ ಅನ್ನು ಹಾಕಿ, 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಬ್ರಷ್ ನಿಂದ ಟೈಲ್ಸ್ ಸ್ವಚ್ಚಗೊಳಿಸಿ.
ಟೈಲ್ಸ್ ನಲ್ಲಿ ಅಂಟಿಕೊಂಡಿರುವ ಕೊಳಕು ಕಲೆಯನ್ನು ತೆಗೆಯಲು ಬ್ಲೀಚ್ ಅನ್ನು ಬಳಸಬಹುದು. ಟೈಲ್ಸ್ ಮೇಲೆ ಬ್ಲೀಚ್ ಹಾಕಿ ಬಿಸಿ ನೀರಿನಿಂದ ಸ್ವಚ್ಚಗೊಳಿಸಿ.
ಟೈಲ್ಸ್ ಅನ್ನು ಸ್ವಚ್ಚಗೊಳಿಸಲು ಉಪ್ಪನ್ನು ಕೂಡಾ ಬಳಸಬಹುದು. ಇದಕ್ಕಾಗಿ ಟೈಲ್ಸ್ ಮೇಲೆ ಉಪ್ಪು ಮತ್ತು ಲಿಕ್ವಿಡ್ ಸೋಪ್ ಬಳಸಬಹುದು.
ಟೈಲ್ಸ್ ಮೇಲೆ ಡಿಟರ್ಜೆಂಟ್ ಪೌಡರ್ ಹಾಕಿ ಬ್ರಷ್ ನಿಂದ ತೊಳೆಯಿರಿ.
ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ