ಪಾರಿಜಾತದ ಗಿಡಕ್ಕೆ ಈ ವಸ್ತು ಹಾಕಿದರೆ ಎಲೆಯೂ ಕಾಣದಂತೆ ಹೂವು ಅರಳಿ ನಿಲ್ಲುವುದು.
ಪಾರಿಜಾತದ ಗಿಡದಲ್ಲಿ ಹೂವು ಬಿಡುವುದು ಕಡಿಮೆಯಾದರೆ ಸಾಸಿವೆ ಗೊಬ್ಬರವನ್ನು ಹಾಕಿ.
ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಯನ್ನು ಹಾಕುವುದರಿಂದಲೂ ಪಾರಿಜಾತ ಗಿಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೂ ಬಿಡುತ್ತದೆ.
ಈರುಳ್ಳಿ ಸಿಪ್ಪೆಯನ್ನು ೩ ದಿನಗಳವರೆಗೆ ನೀರಿನಲ್ಲಿ ನೆನೆಸಿ ಆ ನೀರನ್ನು ಫಿಲ್ಟರ್ ಮಾಡಿ ಪಾರಿಜಾತದ ಗಿಡಕ್ಕೆ ಹಾಕಿ.
ಕೀಟಗಳ ಕಾರಣದಿಂದ ಸಸ್ಯ ಹೂ ಬಿಡುವುದನ್ನು ನಿಲ್ಲಿಸಿದರೆ ಬೇವಿನ ಎಣ್ಣೆಯನ್ನು ಸ್ಪ್ರೇ ಮಾಡಬಹುದು.
ತೋಟದ ಫಲವತ್ತಾದ ಮಣ್ಣನ್ನು ಹಾಕಿದರೆ ಕೂಡಾ ಪಾರಿಜಾತದ ಹೂವು ಸಸಿ ತುಂಬಾ ಬಿಡುತ್ತದೆ.
ತಿಂಗಳಿಗೊಮ್ಮೆ ನೈಸರ್ಗಿಕ ಗೊಬ್ಬರವನ್ನು ಸಸ್ಯಕ್ಕೆ ಹಾಕುವುದರಿಂದ ಗಿಡಕ್ಕೆ ಅಗತ್ಯವಾದ ಪೋಷಕಾಂಶ ಸಿಗುತ್ತದೆ.
ಯಾವುದೇ ಗಿಡದ ಉತ್ತಮ ಬೆಳವಣಿಗೆಗೆ ಸೂರ್ಯನ ಬೆಳಕು ಮತ್ತು ನೀರಿನ ಅಗತ್ಯವಿದೆ. ಈ ಸಸ್ಯಕ್ಕೆ ೩ ರಿಂದ ೫ ಗಂಟೆಗಳ ಸೂರ್ಯನ ಬೆಳಕಿನ ಅಗತ್ಯವಿರುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.