ಮೃದು ಚಪಾತಿ ಮಾಡುವ ವಿಧಾನ

ಚಪಾತಿ ಅಥವಾ ಫುಲ್ಕಾ ಭಾರತದಲ್ಲಿ ಅತೀ ಹೆಚ್ಚಾಗಿ ಸೇವಿಸುವ ಆಹಾರಗಳಲ್ಲಿ ಒಂದು. ಗೋಧಿ ಹಿಟ್ಟಿನಿಂದ ಮಾಡಲ್ಪಡುವ ಈ ತಿನಿಸು ಆರೋಗ್ಯಕ್ಕೆ ಬಹಳ ಒಳ್ಳೆಯದು.

ಚಪಾತಿ ಮಾಡಲು ಬೇಕಾಗಿರುವುದು ಗೋಧಿ ಹಿಟ್ಟು, ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು. ಕೆಲವರು ಎಣ್ಣೆಯನ್ನು ಸಹ ಬಳಕೆ ಮಾಡುತ್ತಾರೆ. ಚಪಾತಿಯನ್ನು ಹೆಚ್ಚಾಗಿ ಉತ್ತರ ಭಾರತದ ಜನ ಸೇವನೆ ಮಾಡುತ್ತಾರೆ.

ಮೃದು ಚಪಾತಿ ಮಾಡುವ ವಿಧಾನ

ಇಂದು ನಾವು ಮೃದುವಾಗಿ, ಪೂರಿಯಂತೆ ಉಬ್ಬುವ ಚಪಾತಿ ಹೇಗೆ ಮಾಡುವುದು ಎಂಬ ಸುಲಭ ವಿಧಾನವನ್ನು ತಿಳಿಸಲಿದ್ದೇವೆ.

ಮೃದು ಚಪಾತಿ ಮಾಡುವ ವಿಧಾನ

ಮೊದಲಿಗೆ ಒಂದು ಪಾತ್ರೆಯಲ್ಲಿ 2 ಕಪ್ ಗೋಧಿ ಹಿಟ್ಟನ್ನು ಹಾಕಿ, ನಿಧಾನವಾಗಿ ಸ್ವಲ್ಪ ಸ್ವಲ್ಪ ನೀರನ್ನು ಸೇರಿಸುತ್ತಾ ಹಿಟ್ಟನ್ನು ಮಿಕ್ಸ್ ಮಾಡಿಕೊಳ್ಳಿ.

ಮೃದು ಚಪಾತಿ ಮಾಡುವ ವಿಧಾನ

ಇದೇ ಹಿಟ್ಟಿಗೆ ಕೊಂಚ ಹಾಲನ್ನು ಬೆರೆಸಿದರೆ ರುಚಿಯ ಜೊತೆಗೆ ಮೃದುವಾದ ಚಪಾತಿ ಮಾಡಬಹುದು.

ಮೃದು ಚಪಾತಿ ಮಾಡುವ ವಿಧಾನ

ಈ ಹಿಟ್ಟನ್ನು ಸಾಧ್ಯವಾದಷ್ಟು ಚೆನ್ನಾಗಿ ಅದ್ದಿ. ಕೊನೆಗೆ ಕೊಂಚ ಎಣ್ಣೆ ಸವರಿ, ಒದ್ದೆಯಾದ ಬಟ್ಟೆ ಅಥವಾ ಪ್ಲಾಸ್ಟಿಕ್ ಹೊದಿಕೆಯಿಂದ 15 ರಿಂದ 30 ನಿಮಿಷಗಳವರೆಗೆ ಮುಚ್ಚಿ.

ಮೃದು ಚಪಾತಿ ಮಾಡುವ ವಿಧಾನ

ಬಳಿಕ ಮತ್ತೊಮ್ಮೆ ಚೆನ್ನಾಗಿ ಹಿಟ್ಟನ್ನು ಅದ್ದಿ ಉಂಡೆಗಳನ್ನಾಗಿ ಮಾಡಿ. ಚಪಾತಿ ಆಕಾರದಲ್ಲಿ ಲಟ್ಟಿಸಿ, ಬಳಿಕ ತವಾ ಮೇಲೆ ಹಾಕಿ, ಚಪಾತಿ ಬಿಸಿ ಮಾಡಲು ಕಬ್ಬಿಣದ ತವಾ ಉಪಯೋಗಿಸಿದರೆ ಚಪಾತಿ ಉಬ್ಬಿ ಬರುತ್ತದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

VIEW ALL

Read Next Story