ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವ ರೋಸ್ ವಾಟರ್ ಚರ್ಮದ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಎಣ್ಣೆಯುಕ್ತ, ಮೊಡವೆ ಪೀಡಿತ ತ್ವಚೆಗೆ ಅತ್ಯುತ್ತಮ ಮನೆಮದ್ದಾಗಿರುವ ರೋಸ್ ವಾಟರ್ ಬಳಕೆಯಿಂದ ಸುಂದರ ಕಾಂತಿಯುತ ತ್ವಚೆಯನ್ನು ಪಡೆಯಬಹುದು.
ರೋಸ್ ವಾಟರ್ ಬಳಕೆಯಿಂದ ಚರ್ಮವು ಹೈಡ್ರೇಟ್ ಆಗಿರುತ್ತದೆ. ಇದು ಚರ್ಮದಲ್ಲಿ ನೈಸರ್ಗಿಕ ತೈಲವನ್ನು ಸಮತೋಲನಗೊಳಿಸುವಲ್ಲಿ ಪರಿಣಾಮಕಾರಿ ಆಗಿದೆ.
ಮುಖದಲ್ಲಿ ಮೂಡಿರುವ ಸಣ್ಣ-ಸಣ್ಣ ರಂಧ್ರಗಳನ್ನು ಬಿಗಿಗೊಳಿಸಲು ಹಾಗೂ ಚರ್ಮವನ್ನು ರಿಫ್ರೆಶ್ ಮಾಡಲು ರೋಸ್ ವಾಟರ್ ಅನ್ನು ನೈಸರ್ಗಿಕ ಟೋನರ್ ಆಗಿ ಬಳಸಬಹುದು.
ಹತ್ತಿ ಉಂಡೆಯನ್ನು ರೋಸ್ ವಾಟರ್ ನಲ್ಲಿ ಅಡ್ಡಿ ಕಣ್ಣುಗಳ ಮೇಲೆ ಇರಿಸುವುದರಿಂದ ಡಾರ್ಕ್ ಸರ್ಕಲ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ರೋಸ್ ವಾಟರ್ ಸ್ಪ್ರೇ ಅನ್ನು ಆಗಾಗ್ಗೆ (ದಿನಕ್ಕೆ ನಾಲ್ಕೈದು ಬಾರಿ) ಮುಖಕ್ಕೆ ಸ್ಪ್ರೇ ಮಾಡುವುದರಿಂದ ತ್ವಚೆ ಕಾಂತಿಯುತವಾಗಿರುತ್ತದೆ.
ಬಿಸಿಲಿನಲ್ಲಿರುವಾಗ ಅತಿಯಾದ ಸೆಕೆ, ಶಾಖದ ಕಿರಿಕಿರಿಯನ್ನು ತಪ್ಪಿಸಲು ರೋಸ್ ವಾಟರ್ ಅತ್ಯುತ್ತಮ ಪರಿಹಾರ. ಇದರಿಂದ ಚರ್ಮ ಕಳೆಗುಂದುವುದನ್ನು ಸಹ ತಪ್ಪಿಸಬಹುದು.
ನಿಂಬೆ ರಶದೊಂದಿಗೆ ರೋಸ್ ವಾಟರ್ ಬೆರೆಸಿ ಲೇಪಿಸುವುದರಿಂದ ಮೊಡವೆಯಿಂದ ಸುಲಭವಾಗಿ ಪರಿಹಾರ ಪಡೆಯಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.